ಇಂಟರ್ನೆಟ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ‘ಕಾಳಿ’ ಚಿತ್ರದ ಈ ಪೋಸ್ಟರ್..! 05-07-2022 11:03AM IST / No Comments / Posted In: Featured News, Live News, Entertainment ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಇತ್ತೀಚಿನ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಟ್ವೀಟ್ ಮಾಡಿದ ಕೆಲವೇ ದಿನಗಳಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಳೆದ ಶನಿವಾರ ಟ್ವೀಟ್ ಮಾಡಲಾದ ಪೋಸ್ಟರ್‌ನಲ್ಲಿ ಹಿಂದೂ ದೇವತೆ ಕಾಳಿಯಂತೆ ಧರಿಸಿರುವ ಮಹಿಳೆಯೊಬ್ಬರು ಸಿಗರೇಟ್ ಸೇದುತ್ತಿರುವುದನ್ನು ಮತ್ತು ಕೈಯಲ್ಲಿ ಎಲ್.ಜಿ.ಬಿ.ಟಿ. ಸಮುದಾಯವನ್ನು ಪ್ರತಿನಿಧಿಸುವ ಹೆಮ್ಮೆಯ ಧ್ವಜವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಈ ಕಾಳಿ ಪೋಸ್ಟರ್ ಆನ್‌ಲೈನ್‌ನಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ಅನೇಕರು ಆಕೆಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ಶೀಘ್ರದಲ್ಲೇ, ಲೀನಾ ಮಣಿಮೇಕಲೈ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಎದುರಾದ ಈ ಆಕ್ರೋಶಕ್ಕೆ ಉತ್ತರಿಸಿದ ಕೆನಡಾ ಮೂಲದ ಮಣಿಮೇಕಲೈ ಬಳಕೆದಾರರನ್ನು ಅರೆಸ್ಟ್ ಲೀನಾ ಮಣಿಮೇಕಲೈ ಬದಲಿಗೆ ಲವ್ ಯು ಲೀನಾ ಮಣಿಮೇಕಲೈ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸುವಂತೆ ಒತ್ತಾಯಿಸಿದರು. ಒಂದು ಸಂಜೆ ಕಾಳಿ ಕಾಣಿಸಿಕೊಂಡಾಗ ಮತ್ತು ಟೊರೊಂಟೊದ ಬೀದಿಗಳಲ್ಲಿ ಅಡ್ಡಾಡುವ ಘಟನೆಗಳ ಸುತ್ತ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ನೋಡಿದ್ರೆ ಅರೆಸ್ಟ್ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಹಾಕದೇ ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಹಾಕಿ ಎಂದು ತಮಿಳಿನಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ ಬಹುಸಂಸ್ಕೃತಿಯನ್ನು ಆಚರಿಸುವ ಒಂದು ವಾರದ ಉತ್ಸವವಾದ ರಿದಮ್ಸ್ ಆಫ್ ಕೆನಡಾದಲ್ಲಿ ಕಾಳಿಯ ಈ ಪೋಸ್ಟರ್ ಅನ್ನು ಮೊದಲ ಬಾರಿ ಪ್ರದರ್ಶಿಸಲಾಯಿತು. ஒரு மாலைப்பொழுது, டோரோண்டோ மாநகரத்தில காளி தோன்றி வீதிகளில் உலா வரும்போது நடக்கிற சம்பவங்கள் தான் படம். படத்தைப்பார்த்தா “arrest leena manimekalai” hashtag போடாம “love you leena manimekalai” hashtag போடுவாங்க.✊🏽 https://t.co/W6GNp3TG6m — Leena Manimekalai (@LeenaManimekali) July 4, 2022 “எனக்கு இழப்பதற்கு ஒன்றுமில்லை. இருக்கும் வரை எதற்கும் அஞ்சாமல் நம்புவதைப் பேசும் குரலோடு இருந்துவிட விரும்புகிறேன். அதற்கு விலை என் உயிர் தான் என்றால் தரலாம்” https://t.co/fEU3sWY4HK — Leena Manimekalai (@LeenaManimekali) July 4, 2022