alex Certify ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರ ಸ್ಕ್ರೀನ್​ ಮಾಡುವುದಾಗಿ ಹೇಳಿದ ವಿಶ್ವವಿದ್ಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರ ಸ್ಕ್ರೀನ್​ ಮಾಡುವುದಾಗಿ ಹೇಳಿದ ವಿಶ್ವವಿದ್ಯಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಬಿಬಿಸಿ ಸರಣಿಯ ಪ್ರದರ್ಶನ ತಡೆಯಲು ಎರಡು ದಿನಗಳ ಹಿಂದೆ ನಂತರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳವರೆಗೆ ಪವರ್​ ಕಟ್​ ಮಾಡಿದ ಬೆನ್ನಲ್ಲೇ ರಾಜಧಾನಿಯ ಇತರ ಎರಡು ಉನ್ನತ ವಿಶ್ವವಿದ್ಯಾಲಯಗಳಾದ ದೆಹಲಿ ವಿಶ್ವವಿದ್ಯಾಲಯ ಮತ್ತು ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಈ ವಿಡಿಯೋ ಪ್ರದರ್ಶನ ಮಾಡುವುದಾಗಿ ಘೋಷಿಸಲಾಗಿದೆ. ಎರಡೂ ವಿಶ್ವವಿದ್ಯಾಲಯಗಳು ದೆಹಲಿಯ ಉತ್ತರ ಜಿಲ್ಲೆಯಲ್ಲಿ ಬರುತ್ತವೆ.

ಅಂತಹ ಸ್ಕ್ರೀನಿಂಗ್‌ಗೆ ವಿಶ್ವವಿದ್ಯಾಲಯಗಳು ಅನುಮತಿ ನೀಡಿಲ್ಲ ಮತ್ತು ದೆಹಲಿ ಪೊಲೀಸರನ್ನೂ ಸಂಪರ್ಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತಾ ದೃಷ್ಟಿಯಿಂದ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ತಪಾಸಣೆಗೆ ಜಮಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಕೋರಿಕೆಯ ಮೇರೆಗೆ ಶುಕ್ರವಾರ ತರಗತಿಗಳನ್ನು ಸ್ಥಗಿತಗೊಳಿಸಿದೆ.

ಸ್ಕ್ರೀನಿಂಗ್ ಆಯೋಜಿಸಲು ಕೆಲವು ವಿದ್ಯಾರ್ಥಿಗಳು ಮಾಡಿದ ಪ್ರಯತ್ನವನ್ನು ವಿಶ್ವವಿದ್ಯಾಲಯವು ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ಉಪಕುಲಪತಿ ನಜ್ಮಾ ಅಖ್ತರ್ ಹೇಳಿದ್ದಾರೆ ಇದರ ಬಳಿಕ ಕಳೆದ ಬುಧವಾರ, ವಿಶ್ವವಿದ್ಯಾಲಯದ 13 ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನೊಳಗೆ ಸ್ಕ್ರೀನಿಂಗ್ ಆಯೋಜಿಸಿದ್ದಕ್ಕಾಗಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಯಿತು. ವಿಶ್ವವಿದ್ಯಾಲಯದ ಆಡಳಿತವು ಸ್ಕ್ರೀನಿಂಗ್‌ಗೆ ಅನುಮತಿ ನೀಡಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

“ಇಂಡಿಯಾ: ದಿ ಮೋದಿ ಕ್ವೆಶ್ಚನ್” ಎಂಬ ಹೆಸರಿನ ಈ ಸಾಕ್ಷ್ಯಚಿತ್ರದಲ್ಲಿ ಗುಜರಾತ್​ನಲ್ಲಿ ನಡೆದ ಗಲಭೆಗೆ ಅಂದು ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ಕಾರಣ ಎನ್ನುವುದನ್ನು ಇದರಲ್ಲಿ ಬಿಂಬಿಸಲಾಗಿದ್ದು, ಈ ಚಿತ್ರದ ಸ್ಕ್ರೀನಿಂಗ್​ಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...