ಚೆನ್ನೈ: ಸಂಗೀತ ನಿರ್ದೇಶಕ ಇಳಯರಾಜ ಅವರು ಪುಸ್ತಕವೊಂದರ ಮುನ್ನುಡಿಯಲ್ಲಿ ಪ್ರಸ್ತಾವಿಸಿರುವ ವಿಷಯಗಳು ವಿವಾದ ಎಬ್ಬಿಸಿರುವ ಬೆನ್ನಲ್ಲೇ, ಅವರ ಪುತ್ರ ಯುವನ್ ಶಂಕರ್ ರಾಜಾ ಅವರೂ ವಿವಾದದ ಸುಳಿಗೆ ಸಿಲುಕಿದ್ದಾರೆ.
ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿಕೊಂಡಿರುವ ಯುವನ್, ಅದಕ್ಕೆ ‘Dark Dravidian, proud Tamizhan’ ಎಂಬ ಕ್ಯಾಪ್ಶನ್ ಕೊಟ್ಟಿರುವುದು ದ್ರಾವಿಡರ ಕುರಿತಾದ ಚರ್ಚೆಯನ್ನು ಹುಟ್ಟು ಹಾಕಿದ್ದು, ವಿವಾದದ ಕಿಡಿ ಹೊತ್ತಿಸಿದೆ. ಈ ಟಿತ್ರಕ್ಕೆ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಹಾಗೂ ನಾಮ್ ತಮಿಜಾರ್ ಕಚ್ಚಿ ಮುಖಂಡ ಸೀಮನ್ ಪ್ರತಿಕ್ರಿಯಿಸಿದ್ದಾರೆ.
ಬೇಸಿಗೆಯಲ್ಲಿ ಚವನ್‌ಪ್ರಾಶ್ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಸಂಪೂರ್ಣ ಮಾಹಿತಿ
ಇತ್ತೀಚೆಗೆ ಇಳಯರಾಜಾ ಅವರು ಇತ್ತೀಚೆಗೆ ಪುಸ್ತಕವೊಂದಕ್ಕೆ ಮುನ್ನುಡಿ ಬರೆಯುತ್ತ ಬಿ.ಆರ್. ಅಂಬೇಡ್ಕರ್ ಮತ್ತು ಪ್ರಧಾನಿ ಮೋದಿ ಅವರನ್ನು ಹೋಲಿಸಿದ್ದರು. ಮೋದಿ ಆಡಳಿತವನ್ನು ಅಂಬೇಡ್ಕರ್ ಖಂಡಿತವಾಗಿಯೂ ಮೆಚ್ಚಿಕೊಳ್ಳುತ್ತಾರೆ ಎಂದು ಬರೆದಿದ್ದರು. ಇದಕ್ಕೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಬಿಜೆಪಿ ಇಳಯರಾಜಾ ಅವರನ್ನು ಬೆಂಬಲಿಸಿ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವೇ ಈ ವಿವಾದಕ್ಕೆ ಕಾರಣವೆಂದು ದೂರಿದ್ದರು. ಅಲ್ಲದೆ, ಇಳಯರಾಜಾ ಅವರ ವಾಕ್ ಸ್ವಾತಂತ್ರ್ಯವನ್ನು ಡಿಎಂಕೆ ಕಸಿದುಕೊಳ್ಳುತ್ತಿದೆ ಎಂದೂ ಬಿಜೆಪಿ ಆರೋಪಿಸಿದೆ. ತೆಲಂಗಾಣ ಮತ್ತು ಪಾಂಡಿಚೆರಿ ರಾಜ್ಯಪಾಲರಾದ ಟಿ. ಸೌಂದರರಾಜನ್ ಅವರೂ ಇಳಯರಾಜ ಅವರನ್ನು ಬೆಂಬಲಿಸಿದ್ದಾರೆ.
ಕಪ್ಪು ಟೀಶರ್ಟ್ ಮತ್ತು ಲುಂಗಿಯಲ್ಲಿರುವ ತಮ್ಮ ಚಿತ್ರವನ್ನು ಹಂಚಿಕೊಂಡಿರುವ ಯುವನ್, ಕಪ್ಪು ದ್ರಾವಿಡ, ಹೆಮ್ಮೆಯ ತಮಿಳನ್’ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಅಣ್ಣಾಮಲೈ, ‘ಯುವನ್ ಕಪ್ಪಾದರೆ, ಅವರು (ಅಣ್ಣಾಮಲೈ) ಕಾಡಿನ ಕಾಗೆಯಂತೆ ಕಪ್ಪಾಗಿದ್ದಾರೆ. ಅದೂ, ಶುದ್ಧ ದ್ರಾವಿಡರಾಗಿ’ ಎಂದು ಪ್ರತಿಕ್ರಿಯಿಸಿದ್ದರೆ, ಸೀಮನ್, ಒಬ್ಬರು ಕಪ್ಪಾಗಿರುವ ಮಾತ್ರಕ್ಕೆ ಅವರು ದ್ರಾವಿಡರು ಹೌದೋ ಅಲ್ಲವೋ ಎಂದು ಅರ್ಥವಲ್ಲ. ದಕ್ಷಿಣ ಆಫ್ರಿಕಾದಲ್ಲಿ ಎಲ್ಲರು ಕಪ್ಪು ವರ್ಣದವರೇ ಆಗಿದ್ದಾರೆ. ಅವರು ದ್ರಾವಿಡರೆಂದು ಅರ್ಥವೇ? ಎಮ್ಮೆಗಳೂ ಕಪ್ಪಾಗಿರುತ್ತವೆ. ಅವುಗಳೂ ದ್ರಾವಿಡರೇ? ಎಂದು ಪ್ರಶ್ನಿಸಿದ್ದಾರೆ.