ರಾಯ್‌ಪುರ: ತನ್ನ ಕಪ್ಪನೆಯ ಮೈಬಣ್ಣದ ಬಗ್ಗೆ ಪದೇ ಪದೇ ಹೀಯಾಳಿಸುತ್ತಿರುವುದಕ್ಕೆ ಮನನೊಂದ 30 ವರ್ಷದ ಮಹಿಳೆ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಹೆಂಡತಿಯನ್ನು ಕೊಳಕು ಎಂದು ಕರೆಯುತ್ತಿದ್ದ ಪತಿ ಅವಳ ಕಪ್ಪು ಚರ್ಮದ ಬಗ್ಗೆ ಆಗಾಗ್ಗೆ ಅವಳನ್ನು ನಿಂದಿಸುತ್ತಿದ್ದನು. ಈ ವಿಚಾರವಾಗಿ ದಂಪತಿ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳವಾಗಿತ್ತು. ಶನಿವಾರ ರಾತ್ರಿ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಕೋಪದ ಭರದಲ್ಲಿ ಪತ್ನಿ ಮನೆಯಲ್ಲಿಟ್ಟಿದ್ದ ಕೊಡಲಿಯಿಂದ ಪತಿ ಮೇಲೆ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾರೆ. ಜನನಾಂಗವನ್ನು ಕೂಡ ಕತ್ತರಿಸಿದ್ದಾಳೆ.
ಭಾನುವಾರ ರಾತ್ರಿ ಅಮಲೇಶ್ವರ ಗ್ರಾಮದಲ್ಲಿ ಪತಿ ಅನಂತ್ ಸೋನ್ವಾನಿ(40) ಅವರನ್ನು ಕೊಂದ ಆರೋಪದಲ್ಲಿ ಸಂಗೀತಾ ಸೋನ್ವಾನಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ(ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ತಿಳಿಸಿದ್ದಾರೆ.
ಸಂತ್ರಸ್ತೆ ತನ್ನ ಮೊದಲ ಪತ್ನಿಯ ಸಾವಿನ ನಂತರ ಆರೋಪಿಯನ್ನು ಮದುವೆಯಾಗಿದ್ದ. ಆರೋಪಿ ಮರುದಿನ ಬೆಳಿಗ್ಗೆ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಹೇಳುವ ಮೂಲಕ ಗ್ರಾಮಸ್ಥರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು, ಆದರೆ ನಂತರ ಪೊಲೀಸ್ ವಿಚಾರಣೆಯಲ್ಲಿ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.