
ಬ್ಲೌಸ್ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿಕೊಂಡ ಮಹಿಳೆಯೊಬ್ಬರು, ಇದರ ಬೆನ್ನಿಗೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ತನ್ನ ಇಚ್ಛೆಯಂತೆ ಬ್ಲೌಸ್ ಅನ್ನು ಹೊಲೆಸಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ ಈ ಮಹಿಳೆ ತನ್ನ ಪತಿಯೊಂದಿಗೆ ಮುನಿಸಿಕೊಂಡಿದ್ದರು. 35 ವರ್ಷ ವಯಸ್ಸಿನ ವಿಜಯಲಕ್ಷ್ಮಿ ಅವರ ಪತಿ ಶ್ರೀನಿವಾಸ್ ವೃತ್ತಿಯಲ್ಲಿ ದರ್ಜಿಯಾಗಿದ್ದು, ಹೈದರಾಬಾದ್‌ನ ಅಂಬರ್‌ಪೇಟ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪತಿ ತನಗಾಗಿ ಹೊಲೆದ ಬ್ಲೌಸ್ ಬಗ್ಗೆ ಅಸಮಾಧಾನಗೊಂಡು ಜಗಳವಾಡಿಕೊಂಡ ಬಳಿಕ ವಿಜಯಲಕ್ಷ್ಮಿ ತಮ್ಮ ಕೋಣೆಯಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
BIG NEWS: ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ…; ಸಚಿವ ಸುಧಾಕರ್ ಸ್ಪಷ್ಟನೆ
ಪತಿಯೊಂದಿಗೆ ಜಗಳವಾಡಿದ ಬೆನ್ನಿಗೇ, ಕೋಣೆ ಸೇರಿಕೊಂಡು ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ ವಿಜಯಲಕ್ಷ್ಮಿ. ಶಾಲೆಯಿಂದ ಮನೆಗೆ ಮರಳಿದ ಮಕ್ಕಳು ಅದೆಷ್ಟು ಬಾರಿ ಬಾಗಿಲು ಬಡಿದರೂ ತಮ್ಮ ತಾಯಿ ಬಾಗಿಲು ತೆರೆಯದೇ ಇದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಈ ವಿಚಾರ ತಿಳಿದ ಶ್ರೀನಿವಾಸ್ ಮನೆಗೆ ಬಂದು ಬಾಗಿಲನ್ನು ಮುರಿದು ತೆರೆದಾಗ ವಿಜಯಲಕ್ಷ್ಮಿ ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.