![](https://kannadadunia.com/wp-content/uploads/2023/09/india-pakistan-odi.png)
ಅಹಮದಾಬಾದ್: ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯ ಹಿನ್ನೆಲೆಯಲ್ಲಿ ಅಹಮದಾಬಾದ್ ನಲ್ಲಿ ಲಾಡ್ಜ್, ಹೋಟೆಲ್, ವಿಮಾನಯಾನ ದರ ಭಾರಿ ಏರಿಕೆ ಕಂಡಿದೆ.
ಅಕ್ಟೋಬರ್ 13ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ, ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಪಂದ್ಯದ ಹಿಂದಿನ ಮತ್ತು ಮುಂದಿನ ದಿನಗಳ ಅಹಮದಾಬಾದ್ ವಿಮಾನಯಾನ ದರ ಶೇಕಡ 415 ರಷ್ಟು ಹೆಚ್ಚಳವಾಗಿದೆ.
ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಅಹಮದಾಬಾದ್ ಗೆ ಬರುವ ಹಿನ್ನೆಲೆಯಲ್ಲಿ ವಿಮಾನಯಾನದ ಶೇಕಡ 415 ರಷ್ಟು ಏರಿಕೆ ಕಂಡಿದ್ದು, ಹೋಟೆಲ್ ಮತ್ತು ಲಾಡ್ಜ್ ಗಳ ದರ ಕೂಡ ಭಾರಿ ಏರಿಕೆಯಾಗಿದೆ.