ಕೊರೊನಾ ವೈರಸ್ ಸೋಂಕು ಇಡೀ ವಿಶ್ವದ ನಿದ್ರೆಗೆಡಿಸಿದೆ. ಚೀನಾದ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಮಧ್ಯೆ ತಜ್ಞರು ಮತ್ತೊಂದು ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಕೊರೊನಾ ವೈರಸ್ ಹರಡುವ ಮೊದಲೇ ಚೀನಾದಲ್ಲಿ ವೈರಸ್ ಗೆ ಲಸಿಕೆ ಕಂಡು ಹಿಡಿಯಲಾಗಿದೆ ಎಂದು ತಜ್ಞರು ಹೇಳ್ತಿದ್ದಾರೆ.
ಕೊರೊನಾ ವೈರಸ್ ಗೆ ವಿಶ್ವದಲ್ಲಿ 37 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 17 ಕೋಟಿಗೂ ಹೆಚ್ಚು ಮಂದಿ ಸೋಂಕಿಗೊಳಗಾಗಿದ್ದಾರೆ. ಆದ್ರೆ ಸೋಂಕು ಮೊದಲ ಬಾರಿ ಕಾಣಿಸಿಕೊಂಡ ಚೀನಾದಲ್ಲಿ ಕೇವಲ 91 ಸಾವಿರ ಪ್ರಕರಣ ಪತ್ತೆಯಾಗಿದೆ. 4636 ಮಂದಿ ಸಾವನ್ನಪ್ಪಿದ್ದಾರೆ. 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಕೊರೊನಾ ಪ್ರಕರಣದಲ್ಲಿ 98ನೇ ಸ್ಥಾನದಲ್ಲಿದೆ. ಇದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.
ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಟಿ. ಜಾಕೋಬ್ ಜಾನ್, ಚೀನಾದ ಈ ಪ್ರಕರಣದಲ್ಲಿ ಕೆಲವು ರಹಸ್ಯಗಳಿವೆ. ಚೀನಾದಲ್ಲಿ ಹುಟ್ಟಿದ ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಪಂಚದಲ್ಲಿ ರೂಪಾಂತರ ಪಡೆದಿದೆ. ಆದ್ರೆ ಚೀನಾ ಒಳಗೆ ಬೇರೆ ಕೆಲಸ ಮಾಡಿದೆ. ಸಾಂಕ್ರಾಮಿಕ ರೋಗ ಹರಡಿದ ಕೇವಲ 2 ತಿಂಗಳ ನಂತರ ಚೀನಾದ ವಿಜ್ಞಾನಿ ಕೊರೊನಾ ಲಸಿಕೆಯ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಕೇವಲ 2 ತಿಂಗಳಲ್ಲಿ ಈ ಕಾಯಿಲೆಗಳಿಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಿಲ್ಲ. ಕನಿಷ್ಠ ಒಂದು ವರ್ಷದ ಹಿಂದೆ ಅದರ ಕೆಲಸ ಪ್ರಾರಂಭಿಸಿದ್ದಾರೆಂದು ಜಾಕೋಬ್ ಹೇಳಿದ್ದಾರೆ.