ಇತ್ತೀಚೆಗೆ ವಿಚ್ಛೇದನ ಸರ್ವೇಸಾಮಾನ್ಯವಾಗಿದೆ. ಮೊದಲ ಮದುವೆ ಮುರಿದುಕೊಂಡ ಅನೇಕರು ಮರು ಮದುವೆ ಆಗ್ತಿದ್ದಾರೆ. ಕೆಲವರಂತೂ ಮೂರು ನಾಲ್ಕು ಮದುವೆಯಾಗ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಕೂಡ ಮರು ಮದುವೆಯಾಗಿದ್ದಾಳೆ. ಇದ್ರಲ್ಲಿ ವಿಶೇಷವಿದೆ. ಆಕೆ ಮದುವೆಯಾಗಿದ್ದು ಮನುಷ್ಯರನ್ನಲ್ಲ. ನಾಯಿಯನ್ನು. ಅದ್ರಲ್ಲೂ ಹೆಣ್ಣು ನಾಯಿಯನ್ನು.
ಕ್ರೊಆಶಿಯಾದ ನಿವಾಸಿಯಾಗಿರುವ 47 ವರ್ಷದ ಅಮಾಂಡಾ ರೊಜರ್ಸ್ ತನ್ನ ಮೊದಲ ಪತಿಗೆ ಡಿವೋರ್ಸ್ ನೀಡಿ ತನ್ನ ನೆಚ್ಚಿನ ನಾಯಿ ಶೇಬಾ ಜೊತೆ ಮದುವೆಯಾಗಿದ್ದಾಳೆ. ಬಹಳ ಧೂಂ ಧಾಂ ಆಗಿ ನಡೆದ ಇವರ ಮದುವೆಗೆ 200 ಜನ ಹಾಜರಿದ್ದರು.
ವರದಿಯ ಪ್ರಕಾರ, ಡಿವೋರ್ಸ್ ನಂತರ ಅಮಾಂಡಾ ಬಹಳ ತಿಂಗಳು ಒಬ್ಬಂಟಿಯಾಗಿದ್ದಳಂತೆ. ಈಗ ಅವಳು ತನ್ನ ಹೊಸ ಪಾರ್ಟ್ನರ್ ಜೊತೆ ಚೆನ್ನಾಗಿದ್ದಾಳೆ. ಅಮಾಂಡಾ ರೋಜರ್ಸ್, ತನ್ನ ಮೊದಲ ಪತಿಗಿಂತ ಈ ನಾಯಿಯ ಜೊತೆ ನಾನು ಹೆಚ್ಚು ಖುಷಿಯಾಗಿದ್ದೇನೆ. ಈಗ ಇದು ನನ್ನ ಜೀವನದ ಮುಖ್ಯ ಭಾಗವೇ ಆಗಿದೆ. ಇದು ನನ್ನನ್ನು ನಗಿಸುತ್ತದೆ, ಖುಷಿಯಾಗಿಡುತ್ತದೆ ಮತ್ತು ನಾನು ಕಷ್ಟದಲ್ಲಿದ್ದಾಗ ಇದು ನನಗೆ ಸಾಥ್ ನೀಡುತ್ತೆ. ಒಬ್ಬ ಲೈಫ್ ಪಾರ್ಟನರ್ ನಿಂದ ನಾನು ಏನೆಲ್ಲ ಬಯಸಿದ್ದೆನೋ ಅದು ನನಗೆ ಶೇಬಾಳಿಂದ ಸಿಕ್ಕಿದೆ ಎನ್ನುತ್ತಾಳೆ.
ಅಮಾಂಡಾಗೆ ಚಿಕ್ಕಂದಿನಿಂದಲೂ ತನ್ನನ್ನು ತಾನು ಮದುಮಗಳಾಗಿ ನೋಡುವ ಬಯಕೆಯಿತ್ತು. ಈಗ ಎರಡನೇ ಬಾರಿ ಆ ಕನಸು ನನಸಾಗಿದೆ. ಹಾಗಾಗಿ ಮದುವೆಯ ಸಂದರ್ಭದಲ್ಲಿ ಅವಳು ತನ್ನ ವೆಡಿಂಗ್ ಡ್ರೆಸ್ ಅನ್ನು ತಾನೇ ಡಿಸೈನ್ ಮಾಡಿಕೊಂಡಿದ್ದಾಳೆ. ತನ್ನ ನಿರ್ಧಾರದಿಂದ ಬಹಳ ಸಂತಸದಲ್ಲಿರುವ ಅಮಾಂಡಾ, ಶೇಬಾಳ ಜೊತೆ ಮದುವೆಯಾಗಿದ್ದು ತುಂಬ ಖುಷಿ ಕೊಟ್ಟಿದೆ. ಅವಳು ನನ್ನನ್ನು ಎಂದೂ ಸತಾಯಿಸುವುದಿಲ್ಲ. ತುಂಬ ಕಾಳಜಿ ಮಾಡ್ತಾಳೆ ಎಂದು ತನ್ನ ಸಂಗಾತಿ ನಾಯಿಯ ಬಗ್ಗೆ ಹೇಳಿಕೊಂಡಿದ್ದಾಳೆ. ಒಂದು ಟಿವಿ ಶೋದಲ್ಲಿ ಮಾತನಾಡಿದ ಅಮಾಂಡಾ, ನಾಯಿಗೆ ಎರಡು ತಿಂಗಳಾದಾಗಲೇ ನನಗೆ ಅವಳ ಮೇಲೆ ಪ್ರೀತಿ ಶುರುವಾಗಿತ್ತು. ಆಗಲೇ ನಾನು ಒಂದಲ್ಲ ಒಂದು ದಿನ ನಾವಿಬ್ಬರೂ ಒಂದಾಗ್ತೇವೆ ಅಂತ ಅಂದುಕೊಂಡಿದ್ದೆ ಎಂದಿದ್ದಾಳೆ.
ಟಿವಿ ಶೋ ಸಮಯದಲ್ಲಿ ಜನರು, ನಿಮಗೆ ನಾಯಿಯ ಜೊತೆ ಮದುವೆಯಾಗುವ ವಿಚಾರ ಏಕೆ ಬಂತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಾಂಡಾ, ಪ್ರೀತಿ ಹಲವು ರೀತಿಯಲ್ಲಿ ಉಂಟಾಗುತ್ತದೆ. ನನ್ನ ಮತ್ತು ಶೇಬಾಳ ಸಂಬಂಧ ತುಂಬ ಗಾಡವಾದದ್ದು. ಸಮಯ ಕಳೆದಂತೆ ನಮ್ಮ ಸಂಬಂಧ ಇನ್ನೂ ಹೆಚ್ಚಲಿದೆ ಎಂದಿದ್ದಾಳೆ.