alex Certify ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ: ಜನರಲ್ಲಿ ಆರೋಗ್ಯ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ: ಜನರಲ್ಲಿ ಆರೋಗ್ಯ ಸಮಸ್ಯೆ

ನವದೆಹಲಿ: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. ಈಗ ಸ್ವದೇಶಿ ಕೋವಿಡ್ ಲಸಿಕೆ ಎಂದೇ ಜನಪ್ರಿಯವಾಗಿದ್ದ ಕೋವ್ಯಾಕ್ಸಿನ್ ಲಸಕೆಯಿಂದಲೂ ಅಡ್ಡ ಪರಿಣಾಮಗಳು ಉಂಟಾದ ಕಳವಳಕಾರಿ ಸಂಗತಿ ಅಧ್ಯಯನದಲ್ಲಿ ಬಳಕೆಗೆ ಬಂದಿದೆ.

ಬನಾರಸ್ ವಿವಿ ಅಧ್ಯಯನದಲ್ಲಿ ಅಡ್ಡ ಪರಿಣಾಮ ಉಂಟಾಗಿರುವುದು ಬೆಳಕಿಗೆ ಬಂದಿದ್ದು, ಕೋವಿಶೀಲ್ಡ್ ನಂತರ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ ಉಂಟಾಗಿರುವುದು ಗೊತ್ತಾಗಿದೆ.

ಕೋವ್ಯಾಕ್ಸಿನ್ ಪಡೆದ 976 ಜನರನ್ನು ಬನಾರಸ್ ವಿವಿ ಅಧ್ಯಯನ ಮಾಡಿದ್ದು, ಅವರಲ್ಲಿ ಶೇಕಡ 50ರಷ್ಟು ಜನ ಬೇರೆಬೇರೆ ಅನಾರೋಗ್ಯ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ. ಲಸಿಕೆ ಪಡೆದ ಒಂದು ವರ್ಷದ ನಂತರವೂ ಶೇಕಡ 30ರಷ್ಟು ಜನರಿಗೆ ಬೇರೆ ಬೇರೆ ರೀತಿ ಅನಾರೋಗ್ಯ ಉಂಟಾಗಿದೆ. ಲಸಿಕೆ ಪಡೆದವರಲ್ಲಿ ಹೆಚ್ಚಿನವರಿಗೆ ನರ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗಿವೆ. ಅಧ್ಯಯನಕ್ಕೆ ಒಳಪಟ್ಟ ಕೆಲವು ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಕೂಡ ಉಂಟಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...