alex Certify BIG NEWS: ಚಂದ್ರಯಾನ – 3 ಯಶಸ್ಸಿನ ಬೆನ್ನಲ್ಲೇ ‘ಇಸ್ರೋ’ ದಿಂದ ಮತ್ತೊಂದು ಮಹತ್ವದ ಯೋಜನೆ; ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಯಾನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಂದ್ರಯಾನ – 3 ಯಶಸ್ಸಿನ ಬೆನ್ನಲ್ಲೇ ‘ಇಸ್ರೋ’ ದಿಂದ ಮತ್ತೊಂದು ಮಹತ್ವದ ಯೋಜನೆ; ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಯಾನ’

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರದಂದು ತನ್ನ ಚಂದ್ರಯಾನ -3 ಯಶಸ್ವಿಯಾಗಿ ಪೂರೈಸಿದ್ದು, ಇಡೀ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ. ಇದರ ಮಧ್ಯೆ ಇಸ್ರೋ ಮತ್ತೊಂದು ಮಹತ್ವದ ಯೋಜನೆ ಕೈಗೊಳ್ಳಲು ಮುಂದಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಇದನ್ನು ಆರಂಭಿಸುವ ಸಾಧ್ಯತೆ ಇದೆ.

ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಆದಿತ್ಯ ಎಲ್ 1 ಕೈಗೊಳ್ಳಲಾಗುತ್ತಿದ್ದು, ಇಸ್ರೋ ಮುಖ್ಯಸ್ಥ ಸೋಮನಾಥ್ ಬುಧವಾರದಂದು ಈ ವಿಷಯ ತಿಳಿಸಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ಭಾರತ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆದಿತ್ಯ ಎಲ್1 ಈಗಾಗಲೇ ಯೋಜನೆಯ ಪ್ರಕಾರ ನಡೆಯುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಇದನ್ನು ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಉಡಾವಣೆಯು ದೀರ್ಘ ವೃತ್ತದ ಕಕ್ಷೆಗೆ ಹೋಗಲಿದ್ದು, ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುತ್ತದೆ ಎಂದು ಹೇಳಿದ ಇಸ್ರೋ ಮುಖ್ಯಸ್ಥರು, ಇದು ಸುಮಾರು 120 ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇದೀಗ ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿದ್ದು, ಆದಿತ್ಯ ಎಲ್ 1 ಮಿಷನ್ ಶೀಘ್ರದಲ್ಲೇ ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...