ಹೊಸ ಪ್ರತಿಭೆಗಳು ಸೇರಿ ಮಾಡಿರುವ ವಿಭಿನ್ನ ಶೀರ್ಷಿಕೆ ಹೊಂದಿರುವ ‘After ಬ್ರೇಕ್ ಅಪ್’ ಚಿತ್ರದ ಟ್ರೈಲರ್, ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರವನ್ನು ಬಿಜು ನಿರ್ದೇಶಿಸಿದ್ದು, ಫ್ರೈಡೆ ಮ್ಯಾಜಿಕ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ವಿ.ಪಿ. ಯೋಗೇಶ್, ನಿಸರ್ಗ ಹಾಗೂ ಪ್ರಿಯಾ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ.. ಧನುಷ್, ನಿಸರ್ಗ ಮಂಜುನಾಥ್ ಹಾಗೂ ಹಾಗೂ ಮಧುಸೂದನ್ ತೆರೆ ಹಂಚಿಕೊಂಡಿದ್ದು, ಪ್ರವೀಣ್ ಸ್ಯಾಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ವಿನೋದ್ ಲೋಕಣ್ಣವರ್ ಛಾಯಾಗ್ರಹಣ,ಮೋರ ಸಂಕಲನ,ಬಿಜು ಡೇವಿಡ್ ಕಲಾ ನಿರ್ದೇಶನ,ಹಾಗೂ ಮಂಜು ನಾಗಪ್ಪ ಸಾಹಸ ನಿರ್ದೇಶನವಿದೆ.