ಉತ್ತರ ಪ್ರದೇಶದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೀಗ ಎರಡನೇ ಬಾರಿಗೆ ಗೆಲುವು ಸಾಧಿಸಿ 37 ವರ್ಷದಲ್ಲಿ ಯಾವ ಪಕ್ಷವೂ ಸಾಧಿಸದ್ದನ್ನು ಸಾಧಿಸಿ ತೋರಿಸಿದ್ದಾರೆ.
ಅಲ್ಲದೆ, ಐದು ವರ್ಷದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬುಲ್ಡೋಜರ್‌ಗಳ ಮೂಲಕ ತೆರವುಗೊಳಿಸಿದ್ದು ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಅಲ್ಲದೆ, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬುಲ್ಡೋಜರ್‌ಗಳ ಬಗ್ಗೆ ಚರ್ಚೆಯಾಗಿತ್ತು. ಆದರೆ, ಈಗ ಯೋಗಿ ಗೆಲುವಿನ ಬೆನ್ನಲ್ಲೇ ಜನರು ಬುಲ್ಡೋಜರ್ ಚಿತ್ರಗಳನ್ನು ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ.
ಲಖನೌ ನಗರದಾದ್ಯಂತ ಯುವಕರು ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸಿ ಬುಲ್ಡೋಜರ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಲಖನೌನ ಟ್ಯಾಟೂ ಕಲಾವಿದ ಸುರೇಶ್ ಖಾರ್ತಿ ಎಂಬುವವರು ಬುಲ್ಡೋಜರ್ ಟ್ಯಾಟೂ ಕುರಿತು ಮಾತನಾಡಿದ್ದು, ’ಚುನಾವಣೆ ಫಲಿತಾಂಶದ ಬಳಿಕ ಯುವಕರು ಬುಲ್ಡೋಜರ್‌ಗಳ ಚಿತ್ರಗಳನ್ನು ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಜಾಸ್ತಿಯಾಗಿದೆ. ಇನ್ನೂ ಕೆಲವೊಬ್ಬರು ಕೈಮೇಲೆ ಬುಲ್ಡೋಜರ್ ಬಾಬಾ ಎಂಬುದಾಗಿ ಸಹ ಬರೆಸಿಕೊಳ್ಳುತ್ತಿದ್ದಾರೆ. ನಾವು ಇದುವರೆಗೆ 28 ಗ್ರಾಹಕರ ಕೈಮೇಲೆ ಬುಲ್ಡೋಜರ್ ಟ್ಯಾಟೂ ಹಾಕಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
BIG NEWS: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸಚಿವರು, ಶಾಸಕರಿಗೆ ವ್ಯವಸ್ಥೆ
ಚುನಾವಣೆ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯೋಗಿ ಆದಿತ್ಯನಾಥ್ ಅವರನ್ನು ’ಬುಲ್ಡೋಜರ್ ಬಾಬಾ’ ಎಂದು ಟೀಕಿಸಿದ್ದರು. ನಾವು ಇದುವರೆಗೆ ಯೋಗಿ ಅವರನ್ನು ‘ಬಾಬಾ ಚೀಫ್ ಮಿನಿಸ್ಟರ್’ ಎನ್ನುತ್ತಿದ್ದೆವು. ಆದರೆ, ಈಗ ಅವರನ್ನು ಬುಲ್ಡೋಜರ್ ಬಾಬಾ ಎಂದು ಕರೆಯಬಹುದು ಎಂದು ವ್ಯಂಗ್ಯವಾಡಿದ್ದರು. ಆದಾಗ್ಯೂ, ಯೋಗಿ ಆದಿತ್ಯನಾಥ್ ಅವರು ತಮ್ಮ ಎರಡನೇ ಅವಧಿಯಲ್ಲೂ ಬುಲ್ಡೋಜರ್‌ಗಳನ್ನು ಬಳಸಿ ಅಕ್ರಮ ಕಟ್ಟಡಗಳ ತೆರವಿಗೆ ಆದೇಶಿಸುವ ಸಾಧ್ಯತೆ ಹೆಚ್ಚಿದೆ.