ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ಆಕರ್ಷಕವಾಗಿ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಮತ್ತು ರಣಬೀರ್ ಅವರ ಚಲನಚಿತ್ರ ಗೋಲಿಯೋನ್ ಕಿ ರಾಸ್ಲೀಲಾ ರಾಮ್‌ನ ‘ಅಂಗ್ ಲಗಾ ದೇ ರೇ’ ಹಾಡಿಗೆ ನೃತ್ಯ ಮಾಡಿದ್ದು, ಈ ನೃತ್ಯವನ್ನು ಆಕೆಯ ಸಹೋದರಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.
“ಇನ್‌ಸ್ಟಾಗ್ರಾಮ್ ನನಗೆ ಸಂಪೂರ್ಣ ವಿಷಯವನ್ನು ಅಪ್‌ಲೋಡ್ ಮಾಡಲು ಅವಕಾಶವಿಲ್ಲ. ಆದರೆ ಇದು ನನ್ನ ಪ್ರತಿಭಾವಂತ ಸಹೋದರಿಯ ನೃತ್ಯ. ಆಕೆಯ ನೃತ್ಯದ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಅಕ್ಕ ಬರೆದುಕೊಂಡಿದ್ದಾಳೆ. ಇದು ಇದಾಗಲೇ ಎರಡು ಮಿಲಿಯನ್ ವೀಕ್ಷಣೆಗಳನ್ನು ಗೆದ್ದಿದೆ.
ಕೆಲ ತಿಂಗಳ ಹಿಂದೆ ಆಯೇಷಾ ಎನ್ನುವ ಪಾಕಿಸ್ತಾನದ ಯುವತಿ ಮಾಡಿರುವ ನೃತ್ಯ ಇಂದಿಗೂ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಲೇ ಸಾಗಿದೆ. ಈಕೆಯ ನೃತ್ಯವನ್ನು ಅನುಸರಿಸಿ ಹಲವರು ರೀಲ್ಸ್ ಮಾಡುವುದು ಮುಂದುವರೆದಿದೆ. ಇದರ ಬೆನ್ನಲ್ಲೇ ಮತ್ತೋರ್ವ ಪಾಕಿಸ್ತಾನದ ಬೆಡಗಿ ಈ ನೃತ್ಯ ಮಾಡುತ್ತಿರುವುದು ಜನರನ್ನು ಖುಷಿಯಲ್ಲಿ ತೇಲಿಸಿದೆ.
https://www.youtube.com/watch?v=mypFCaMWTaM&feature=youtu.be