ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ಸಿಕ್ಕಿದ ಬೆನ್ನಲ್ಲೇ, ಇದೇ ಮಾದರಿಯಲ್ಲಿ ತನಿಖೆ ನಡೆಸಿ ತಮ್ಮ ಕಕ್ಷಿದಾರೆ ಬಾಲಿವುಡ್ ನಟಿ ರೆಹಾ ಚಕ್ರವರ್ತಿಗೆ ರಿಲೀಫ್ ನೀಡುವಂತೆ ಆಕೆಯ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ಆರ್ಯನ್ ಖಾನ್ ಪರ ವಾದ ಮಂಡನೆ ಮಾಡಿದ್ದ ವಕೀಲ ಸತೀಶ್ ಮಾನೆಶಿಂಧೆ ರೆಹಾ ಚಕ್ರವರ್ತಿ ಪರವಾಗಿಯೂ ವಾದ ಮಂಡನೆ ಮಾಡುತ್ತಿದ್ದಾರೆ.
ರೆಹಾ ಚಕ್ರವರ್ತಿ ಮತ್ತು ಶೊವಿಕ್ ಇಬ್ಬರ ಬಳಿ ಅಂತಹ ವಸ್ತು ಇರುವುದಾಗಲೀ ಪತ್ತೆಯಾಗಿಲ್ಲ. ಅಲ್ಲದೇ ಈ ಬಗ್ಗೆ ಇದುವರೆಗೆ ಯಾವುದೇ ಪರೀಕ್ಷೆಗಳನ್ನೂ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕ್ಷಿಪ್ರಗತಿಯಲ್ಲಿ ಆಗಬೇಕೆಂದು ಸತೀಶ್ ಆಗ್ರಹಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ಇಬ್ಬರು ಮಕ್ಕಳೊಂದಿಗೆ ಮೂವರು ಸಹೋದರಿಯರ ಆತ್ಮಹತ್ಯೆ
ಕಳೆದ ಮೂರು ವರ್ಷಗಳಿಂದ ಎನ್ ಸಿ ಬಿಯವರು ಹಲವಾರು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಮೊದಲು ಈ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿದೆ. ರೆಹಾ ಪ್ರಕರಣದಲ್ಲಿ ಕೇವಲ ವಾಟ್ಸಪ್ ಚಾಟ್ ಗಳಿವೆ ಮತ್ತು ಇದುವರೆಗೆ ಯಾವುದೇ ಪರೀಕ್ಷೆಯನ್ನೂ ನಡೆಸಿಲ್ಲ. ಆರ್ಯನ್ ಪ್ರಕರಣದಲ್ಲಿ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದು ಸಾಬೀತಾಗಿದೆ. ಇದೇ ರೀತಿ ರೆಹಾ ಚಕ್ರವರ್ತಿ ಪ್ರಕರಣದಲ್ಲೂ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಎನ್ ಸಿ ಬಿ ದಾಖಲಿಸಿರುವ ಪ್ರಕರಣಗಳ ತನಿಖೆ ಆದಷ್ಟು ಬೇಗ ಆಗಬೇಕು. ಏಕೆಂದರೆ, ಬಾಲಿವುಡ್ ಉದ್ಯಮದಲ್ಲಿ ನಟ-ನಟಿಯರಿಗೆ ಕೇವಲ 10-20 ವರ್ಷ ವೃತ್ತಿ ಜೀವನ ಇರುತ್ತದೆ. ಆದರೆ, ಎನ್ ಸಿ ಬಿ ಅಧಿಕಾರಿಗಳು ಪ್ರಕರಣಗಳನ್ನು ಕ್ಷಿಪ್ರಗತಿಯಲ್ಲಿ ವಿಚಾರಣೆ ನಡೆಸದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ನಟ-ನಟಿಯರ ವೃತ್ತಿ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.