ನವದೆಹಲಿ : ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಬಳಿಕ ದೆಹಲಿ ಸಚಿವ ಅತಿಶಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಏಳು ಎಎಪಿ ಶಾಸಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸಿದೆ ಎಂಬ ಆಮ್ ಆದ್ಮಿ ಪಕ್ಷದ ಹೇಳಿಕೆಗೆ ನೋಟಿಸ್ ನೀಡಲು ದೆಹಲಿ ಪೊಲೀಸರ ಅಪರಾಧ ( ಕ್ರೈಂ ಬ್ರಾಂಚ್ ) ವಿಭಾಗ ಭಾನುವಾರ ದೆಹಲಿ ಸಚಿವೆ ಅತಿಶಿ ಅವರ ಮನೆಗೆ ದೌಡಾಯಿಸಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ದೆಹಲಿ ಪೊಲೀಸರು ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ನಿವಾಸಕ್ಕೆ ನಿನ್ನೆ ಹೋಗಿದ್ದರು. ಈ ಬೆನ್ನಲ್ಲೇ ಅತಿಶಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ