ಏರ್ ಇಂಡಿಯಾ ಖಾಸಗೀಕರಣ ಪೂರ್ಣಗೊಂಡ ಬಳಿಕ ಇದೀಗ ಅದರ ನಾಲ್ಕು ಇತರ ಅಂಗಸಂಸ್ಥೆಗಳ್ನು ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲಾಯನ್ಸ್ ಏರ್ ಸೇರಿದಂತೆ 14,700 ಕೋಟಿ ರೂ. ಮೀರಿದ ಭೂಮಿ ಹಾಗೂ ಕಟ್ಟಡಗಳನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ದೀಪಮ್) ಈ ಸಂಬಂಧ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದು, ವಿಶೇಷ ವ್ಯವಸ್ಥೆ ಮೂಲಕ ಏರ್ ಇಂಡಿಯಾದ ಅಂಗ ಸಂಸ್ಥೆಗಳ ಮಾರಾಟಕ್ಕೆ ಮುಂದಾಗಿದೆ.
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಯುವಕ ಅರೆಸ್ಟ್
2019ರಲ್ಲಿ ಸ್ಥಾಪಿಸಲಾದ ಈ ವಿಶೇಷ ವ್ಯವಸ್ಥೆಗೆ ಏರ್ ಇಂಡಿಯಾದ ಅಸೆಟ್ಸ್ ಹೋಲ್ಡಿಂಗ್ ಲಿ (ಎಐಎಎಚ್ಎಲ್) ಎಂಬ ಹೆಸರಿಟ್ಟು, ಅದರ ಅಡಿ ಏರ್ ಇಂಡಿಯಾದ ನಾಲ್ಕು ಅಂಗ ಸಂಸ್ಥೆಗಳಾದ ಏರ್ ಇಂಡಿಯಾ ಸಾರಿಗೆ ಸೇವೆಗಳು (ಎಐಎಟಿಎಸ್ಎಲ್), ಏರ್ಲೈನ್ ಅಲಾಯ್ಡ್ ಸರ್ವೀಸಸ್ ಲಿ, ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿ ಮತ್ತು ಹೊಟೇಲ್ ಕಾರ್ಪೋರೇಷನ್ ಆಫ್ ಇಂಡಿಯಾಗಳನ್ನು ಮಾರಲು ಸಿದ್ಧತೆ ಮಾಡಲಾಗಿದೆ.
ಗ್ರೌಂಡ್ ನಿರ್ವಹಣೆ, ಇಂಜಿನಿಯರಿಂಗ್ ಹಾಗೂ ಅಲಾಯನ್ಸ್ ಏರ್ಗಳು ಏರ್ ಇಂಡಿಯಾದ ಅಂಗಸಂಸ್ಥೆಗಳಾಗಿದ್ದು ಇವುಗಳನ್ನು ಖಾಸಗೀಕರಣಗೊಳಿಸಬೇಕಿದೆ ಎಂದು ದೀಪಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ತಿಳಿಸಿದ್ದಾರೆ.
ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..?
ಉಪ್ಪಿನಿಂದ ಸಾಫ್ಟ್ವೇರ್ವರೆಗೂ ವ್ಯಾಪಿಸಿರುವ ಟಾಟಾ ಸಮೂಹ ಏರ್ ಇಂಡಿಯಾದ ಖರೀದಿ ಮಾಡಿದೆ ಎಂದು ಅಕ್ಟೋಬರ್ 8ರಂದು ಭಾರತ ಸರ್ಕಾರ ಘೋಷಿಸಿತ್ತು. ಸಾಲಪೀಡಿತ ಏರ್ ಇಂಡಿಯಾವನ್ನು 18,000 ಕೋಟಿ ತೆತ್ತು ಟಾಟಾ ಖರೀದಿ ಮಾಡಿದೆ. ಇದರಲ್ಲಿ 2,700 ಕೋಟಿ ರೂ.ಗಳನ್ನು ನಗದು ಪಾವತಿ ರೂಪದಲ್ಲಿ ಹಾಗೂ 15,300 ಕೋಟಿ ರೂ.ಗಳ ಸಾಲದ ಹೊರೆಯನ್ನು ಹೊತ್ತುಕೊಳ್ಳುವ ಮೂಲಕ ಟಾಟಾ ಖರೀದಿ ಮಾಡಿದೆ.
ಡಿಸೆಂಬರ್ನಲ್ಲಿ ಅಂತ್ಯಗೊಳ್ಳಲಿರುವ ಡೀಲ್ನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾಗೂ ಗ್ರೌಂಡ್ ನಿರ್ವಹಣೆ ಅಂಗ ಐಸಾಟ್ಸ್ಗಳನ್ನು ಟಾಟಾಗೆ ವರ್ಗಾವಣೆ ಮಾಡಲಾಗುವುದು.