ಅಯೋಧ್ಯೆ : 70 ವರ್ಷಗಳ ಬಳಿಕ ರಾಮ್ ಲಲ್ಲಾ ವಿರಾಜ್ಮಾನ್ ವಿಗ್ರಹವನ್ನು ಭವ್ಯ ರಾಮ ಮಂದಿರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿವೆ.
ರಾಮ್ ಲಲ್ಲಾ ವಿರಾಜ್ಮಾನ್ನ ಮೂಲ ವಿಗ್ರಹವನ್ನು ಜನವರಿ 21 ರ ರಾತ್ರಿ 8 ಗಂಟೆಗೆ ಶಯನ ಆರತಿಯ ನಂತರ ಹೊಸ ರಾಮ್ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು. ರಾಮನ ವಿಗ್ರಹದ ಜೊತೆಗೆ ಹನುಮಾನ್, ಸಹೋದರರಾದ ಲಕ್ಷ್ಮಣ, ಶತ್ರುಘ್ನ ಮತ್ತು ಭರತನ ಮೂಲ ವಿಗ್ರಹಗಳನ್ನು ಸಹ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು.
ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಮೂಲ ವಿಗ್ರಹಗಳನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುವುದು. ಜನವರಿ 21 ರ ಇಂದು ರಾತ್ರಿ ಮೂಲ ವಿಗ್ರಹಗಳನ್ನು ಸ್ಥಳಾಂತರಿಸಲಾಗುತ್ತದೆ. ರಾಮ್ ಲಲ್ಲಾ ವಿಗ್ರಹ ಕಳೆದ 70 ವರ್ಷಗಳಿಂದ ಟೆಂಟ್ ನಲ್ಲಿ ಇರಿಸಲಾಗಿತ್ತು. ಇಂದು ಭವ್ಯ ರಾಮಮಂದಿರಕ್ಕೆ ಸ್ಥಳಾಂತರಿಸಲು ಸಿದ್ಧತೆಗಳು ನಡೆದಿವೆ.