alex Certify 60 ವರ್ಷಗಳ ನಂತರ ಐಕಾನಿಕ್​ ಗ್ರೀನ್​ ಬಾಟಲ್​ ಬಣ್ಣ ಬದಲಿಸಿದ ʼಸ್ಪ್ರೈಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ವರ್ಷಗಳ ನಂತರ ಐಕಾನಿಕ್​ ಗ್ರೀನ್​ ಬಾಟಲ್​ ಬಣ್ಣ ಬದಲಿಸಿದ ʼಸ್ಪ್ರೈಟ್ʼ

ಗ್ರೀನ್​ ಬಾಟಲ್​ನಿಂದಾಗಿಯೇ ಗಮನ ಸೆಳೆಯುತ್ತಿದ್ದ ಸ್ಪ್ರೈಟ್, ಬರೋಬ್ಬರಿ ಅರವತ್ತು ವರ್ಷದ ಬಳಿಕ ಬಣ್ಣ ಬದಲಿಸಿದೆ. ಸ್ಪ್ರೈಟ್​ ಪೋಷಕ ಕಂಪನಿ ಕೋಕಾ-ಕೋಲಾ ಹೊಸ ವಿನ್ಯಾಸವು ಆಗಸ್ಟ್​ 1 ರಂದು ಹೊರಬರುತ್ತಿದೆ. ಪ್ಲಾಸ್ಟಿಕ್​ ಪ್ಯಾಕೇಜಿಂಗ್​ ವಿಷಯದಲ್ಲಿ ಆದೇಶವನ್ನು ಬೆಂಬಲಿಸುವ ಪ್ರಯತ್ನದ ಭಾಗವಾಗಿದೆ ಎಂದು ಕಂಪನಿ ಹೇಳಿದೆ.

ಪ್ರಸ್ತುತ ಹಸಿರು ಪ್ಲಾಸ್ಟಿಕ್​ ಬಾಟಲಿಯನ್ನು ಪಾಲಿಥಿಲೀನ್​ ಟೆರೆಫ್ತಾಲೇಟ್​ (ಪಿಇಟಿ) ನಿಂದ ತಯಾರಿಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಕಾರ್ಪೆಟ್​ಗಳು ಮತ್ತು ಬಟ್ಟೆಗಳಂತಹ ಏಕ-ಬಳಕೆಯ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ. ಹೊಸ ಬಾಟಲಿ ಮರುಬಳಕೆ ಮಾಡುವುದು ಸುಲಭ ಎಂದು ಕಂಪನಿ ಹೇಳಿದೆ.

ಸ್ಪ್ರೈಟ್​ನ ಕ್ಯಾನ್​ಗಳು ಮತ್ತು ಪ್ಯಾಕೇಜಿಂಗ್​ ಗ್ರಾಫಿಕ್ಸ್​ ಇನ್ನೂ ಹಸಿರಾಗಿಯೇ ಇರುತ್ತದೆ, ಆದರೆ ಅದರ ಲೋಗೋ ಬದಲಾಗುತ್ತದೆ. 1961ರಲ್ಲಿ ಯುಎಸ್​ ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಲೆಮನ್​ ಲೈಮ್​ ಸ್ಟಾ​ ಡ್ರಿಂಕ್ ​ಅನ್ನು ಹಸಿರು ಬಣ್ಣದಲ್ಲಿ ಪ್ಯಾಕ್​ ಮಾಡಲಾಗಿತ್ತು. ಕೋಕ್​ ಪ್ರಕಾರ, ಈ ಪಾನೀಯವು ಅದರ ಹೆಚ್ಚು ಮಾರಾಟವಾದ ಉತ್ಪನ್ನಗಳಲ್ಲಿ ಒಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...