ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. ಹೀಗಾಗಿ ಮಹಿಳೆಯರು ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೂವತ್ತರ ಹರೆಯದಲ್ಲಿ ಸೇವಿಸಬೇಕಾದ ಆಹಾರಗಳನ್ನು ತಿಂದು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು.
ಮೀನು
ಮಹಿಳೆಯರಿಗೆ ಹೆಚ್ಚಾಗಿ 30 ವರ್ಷ ದಾಟಿದ ನಂತರ ಗಂಟು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೀನಿನ ಸೇವನೆ ಮಾಡುವುದರಿಂದ ಕಾರ್ಟಿಲೇಜ್ ತಿನ್ನುವ ಕಿಣ್ವಗಳನ್ನು ತಗ್ಗಿಸಿ ಮೂಳೆಗಳ ಆರೋಗ್ಯ ಸುಧಾರಣೆಯಾಗುವಂತೆ ಮಾಡುತ್ತದೆ. ಹಾಗೂ ಕಾರ್ಟಿಲೇಜ್ ಅವನತಿ ತಡೆಯಬಹುದು ಮತ್ತು ಉರಿಯೂತ ಕಡಿಮೆ ಮಾಡಿಕೊಳ್ಳಬಹುದು. ಹಾಗೇ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಬೀಜಗಳು
ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದರಿಂದ ದೇಹಕ್ಕೆ ಶಕ್ತಿ ದೊರಕುತ್ತದೆ ಹಾಗೂ ಪ್ರತಿರೋಧಕ ವ್ಯವಸ್ಥೆ ಬಲಿಷ್ಠವಾಗುವಂತೆ ಮಾಡುತ್ತದೆ. ಬೀಜಗಳಲ್ಲಿ ವಿಟಮಿನ್ ಬಿ ಕೂಡ ಸಮೃದ್ಧವಾಗಿದ್ದು, ರಕ್ತದೊತ್ತಡ ನಿಯಂತ್ರಿಸುವಲ್ಲಿ ನೆರವಾಗುತ್ತದೆ. ಹೃದಯ ಕಾಯಿಲೆಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪ್ರೋಟೀನ್
30 ರ ಬಳಿಕ ಕ್ಯಾಲೋರಿ ದಹಿಸಲು ತುಂಬಾ ಕಠಿಣ. ಹಾಗಾಗಿ ಮಹಿಳೆಯರು ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಬೇಕು. ತೆಳು ಮಾಂಸ ಹೀಗೆ ಪ್ರೊಟೀನ್ ಹೆಚ್ಚಿರುವ ಆಹಾರ ತಿಂದರೆ ಶಕ್ತಿ ಸಿಗುತ್ತದೆ ಮತ್ತು ಚಯಾಪಚಯ ಕ್ರಿಯೆಯು ಸರಿಯಾದ ರೀತಿಯಲ್ಲಿ ಆಗುತ್ತದೆ ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ. ಹಾಗೇ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನದಲ್ಲಿರುತ್ತದೆ.
ಬೇಳೆಕಾಳುಗಳು
ಕಾಳುಗಳನ್ನು ತಿನ್ನುವಂತಹ ಮಹಿಳೆಯರ ಮುಖದಲ್ಲಿ ನೆರಿಗೆ ಮೂಡುವುದು ಕಡಿಮೆ. ಹಾಗೇ ಬಿಸಿಲಿಗೆ ಸಂಬಂಧಿಸಿದ ಯಾವ ಹಾನಿಯೂ ಆಗುವುದಿಲ್ಲ. ಕಾಳುಗಳಲ್ಲಿ ಅತ್ಯಧಿಕ ಮಟ್ಟದ ಆಂಟಿ ಆಕ್ಸಿಡೆಂಟ್ ಇರುವುದರಿಂದ ಆರೋಗ್ಯಕರ ಚರ್ಮಕ್ಕೆ ನೆರವಾಗುತ್ತದೆ ಮತ್ತು ಚರ್ಮದ ರಕ್ಷಣೆ ಮಾಡುತ್ತದೆ.