ಕಳೆದ 21 ವರ್ಷಗಳಲ್ಲಿ ಎಷ್ಟು ಮಂದಿ ಪ್ರಧಾನಿಗಳು, ಸಂಸದರು, ಸದನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರಕಾರದ ಅಧಿಕಾರಿಗಳು ಬದಲಾದರೂ ಅಂಚೆ ಇಲಾಖೆಯ ಪಾರ್ಲಿಮೆಂಟ್ ಬೀಟ್ ಪೋಸ್ಟ್ ಮ್ಯಾನ್ ಮಾತ್ರ ಒಬ್ಬರೇ ಇದ್ದರು. ಅವರೇ, ರಾಮ್ ಶರಣ್.
ಸದ್ಯ ಅವರು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲಾಖೆಯಿಂದ ನಿವೃತ್ತರಾಗಿದ್ದಾರೆ. ಈ ಬಗ್ಗೆ ಅನುಭವ ಹಂಚಿಕೊಂಡಿರುವ ರಾಮ್ ಶರಣ್ ಅವರು, ಸಂಸತ್ತಿನ ಯಾರೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ತಮ್ಮ ಪತ್ರಗಳ ಬಗ್ಗೆ ಅಸಮಾಧಾನಗೊಂಡು, ನಮ್ಮ ಇಲಾಖೆಗೆ ದೂರು ನೀಡಿದರೂ ಬೀಟ್ ಬದಲಾವಣೆ ಮಾಡಿಬಿಡುತ್ತಾರೆ.
ಉಲ್ಟಾ ಮಚ್ಚೆ ಹೇಳಿಕೆ ನಿಜವಾಗಲಿ; ಸಿ.ಟಿ. ರವಿ ಶೀಘ್ರ ಸಂಪುಟ ಸಚಿವರಾಗಲಿ; ಸಿದ್ದರಾಮಯ್ಯ ತಿರುಗೇಟು
ಆದರೆ, ನಾನು ಬಹಳ ಸ್ನೇಹಪೂರ್ವಕವಾಗಿ ಎಲ್ಲರೊಂದಿಗೂ ಇದ್ದ ಕಾರಣ, ಇಲಾಖೆಯಲ್ಲಿ ಸಂಸತ್ ಬೀಟ್ ಮುಂದುವರಿಯುತ್ತಲೇ ಹೋಯಿತು. 2000ನೇ ಇಸವಿಯಲ್ಲಿ ಸಂಸತ್ ಬೀಟ್‍ಗೆ ನಿಯೋಜಿತನಾದೆ. ವಿಪರೀತ ದೊಡ್ಡ ಆವರಣ, ಒಂದು ಕೊಠಡಿಯಿಂದ ಮತ್ತೊಂದಕ್ಕೆ ಅರ್ಧ ಕಿಲೋಮೀಟರ್ ಗಳಷ್ಟು ನಡೆಯಬೇಕಾಗುವ ಕಾರಣ, ಇಲಾಖೆಯಲ್ಲಿ ಕೆಲವರಿಗೆ ಈ ಬೀಟ್ ಬೇಡವಾಗಿತ್ತು.
ಹಲವು ಕೊಠಡಿಗಳು ಒಂದೇ ಸಮನಾಗಿದ್ದು, ಬಹಳ ಗೊಂದಲ ಮೂಡಿಸುತ್ತವೆ. ಹಾಗಿದ್ದೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದೆ ಎನ್ನುತ್ತಾರೆ ರಾಮ್ ಶರಣ್.