ಪ್ರತಿಯೊಂದು ದೇಶವು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿರುತ್ತೆ. ಪ್ರತಿಯೊಂದು ರಾಷ್ಟ್ರವೂ ಸಾಹಿತ್ಯಕ್ಕೆ, ಸಂಗೀತಕ್ಕೆ ಅಥವಾ ಇನ್ಯಾವುದೋ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಹೆಮ್ಮೆಯ ವ್ಯಕ್ತಿಗಳನ್ನ ಸದಾ ಸ್ಮರಿಸುತ್ತಲೇ ಇರುತ್ತದೆ.
ಇದರ ಜೊತೆಯಲ್ಲಿ ವಿದೇಶಿ ಪ್ರಜೆಗಳೂ ನಮ್ಮ ದೇಶದ ದಂತಕತೆಗಳನ್ನ ಸ್ಮರಿಸಿದ್ರೆ ಗೌರವ ಇನ್ನಷ್ಟು ಹೆಚ್ಚಾಗುತ್ತದೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಇದೀಗ ದೇಶಿ ನೆಟ್ಟಿಗರ ಗಮನ ಸೆಳೆದಿದೆ.
ಆಫ್ರಿಕಾದ ಗಿಟಾಯಾ ಎಂಬ ಹೆಸರಿನ ವ್ಯಕ್ತಿಯೊಬ್ಬ ರವೀಂದ್ರನಾಥ್ ಠಾಗೂರ್ರ ಮಾಯಾಬನೋ ಬಿಹಾರಿನಿ ಹೋರಿನಿ ಎಂಬ ಹಾಡನ್ನ ಹಾಡಿದ್ದಾರೆ. ಮಾತ್ರವಲ್ಲದೇ ಈ ಹಾಡನ್ನ ನೋಬೆಲ್ ಪುರಸ್ಕೃತ ರವೀಂದ್ರನಾಥ್ ಠಾಗೂರ್ ಅವರಿಗೇ ಅರ್ಪಿಸಿದ್ದಾರೆ.
ಈ ಹಾಡನ್ನು ನಾನು ಆಫ್ರಿಕಾದ ನನ್ನೆಲ್ಲ ಫೇಸ್ಬುಕ್ ಸ್ನೇಹಿತರಿಗೆ ಅರ್ಪಿಸುತ್ತಿದ್ದೇನೆ . ನನ್ನ ಶಿಕ್ಷಕ ವೃತ್ತಿ ಮೂಲಕ ನಾನು ಸಾಕಷ್ಟು ಜನರ ಸ್ನೇಹ ಸಂಪಾದಿಸಿದ್ದೇನೆ. ನೊಬೆಲ್ ಸಾಹಿತ್ಯ ಪುರಸ್ಕೃತ ಹಾಗೂ ನನ್ನ ಕೊಲ್ಕತ್ತಾ ನಗರದ ರವೀಂದ್ರನಾಥ್ ಠಾಗೂರ್ರ ಹಾಡನ್ನ ದಯವಿಟ್ಟು ಎಂಜಾಯ್ ಮಾಡಿ ಎಂದು ಶೀರ್ಷಿಕೆ ನೀಡಿದ್ದಾರೆ.
https://www.facebook.com/ashis.sanyal.7/videos/3066935833630274/?t=0