ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೃದಯಸ್ಪರ್ಶಿ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಫ್ರಿಕನ್ ವ್ಯಕ್ತಿಯೊಬ್ಬ ತನ್ನ ಮಗ ಮತ್ತು ಹೆಂಡತಿಯೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಲು ಬಯಸಿದ್ದರು.
ಅಲ್ಲಿಗೆ ಭೇಟಿ ನೀಡುವ ಮುನ್ನ ಅವರು ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಲು ಬಯಸಿದ್ರು. ಅಷ್ಟಕ್ಕೂ ಅವರೇನು ಮಾಡಿದ್ರು ಅಂತಾ ಯೋಚನೆ ಮಾಡ್ತಿದ್ದೀರಾ. ಹಾಗಿದ್ರೆ ಈ ಸ್ಟೋರಿ ಓದಿ.
ಹೌದು, ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಲು ವ್ಯಕ್ತಿಯು ತನಗೆ ಸಿಖ್ಖರಂತೆ ಪೇಟ ಖರೀದಿಸಿ, ಅದನ್ನು ತನ್ನ ತಲೆಯ ಮೇಲೆ ಕಟ್ಟಿಸಿಕೊಂಡಿದ್ದಾನೆ. ತನ್ನ ಪುಟ್ಟ ಗಂಡು ಮಗುವಿಗೂ ಕೂಡ ಪೇಟ ಸುತ್ತಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಹೃದಯಸ್ಪರ್ಶಿಯಾಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಎಲೀಸ್ ಮತ್ತು ಲಾರೆನ್ಸ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಲಾರೆನ್ಸ್ ಅವರ ತಲೆಯ ಮೇಲೆ ಮರೂನ್ ಪೇಟವನ್ನು ಕಟ್ಟುತ್ತಿರುವುದನ್ನು ಕಾಣಬಹುದು. ಆತನ ಮಗುವಿಗೂ ಪೇಟ ಸುತ್ತಲಾಗಿದ್ದು, ಮಗು ಕೂಡ ಸಂತೋಷದಿಂದ ನಗೆ ಬೀರಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ನೆಟಿಜನ್‌ಗಳು ಲಾರೆನ್ಸ್ ಅನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸುತ್ತಿದ್ದಾರೆ.