
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದೊಡ್ಡಮನೆಕೇರಿ ನಿವಾಸಿ ಕ್ರೈಸ್ತ ಗುರು ಫಾ. ರಾಬರ್ಟ್ ರೋಡ್ರಿಗಸ್ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿದ್ದಾರೆ.
ಅವರ ಕುಟುಂಬದವರಿಗೆ ಆತಂಕ ಮೂಡಿದ್ದು, ಅಫ್ಘಾನಿಸ್ಥಾನದಲ್ಲಿರುವ ರಾಬರ್ಟ್ ರೋಡ್ರಿಗಸ್ ಸುರಕ್ಷಿತವಾಗಿರುವ ಬಗ್ಗೆ ಸಂದೇಶ ಕಳುಹಿಸಿದ್ದಾರೆ.
ಕ್ರೈಸ್ತ ಗುರುವಾಗಿ ಸೇವೆ ಸಲ್ಲಿಸಲು ಬಯಸಿದ್ದ ರಾಬರ್ಟ್ ರೋಡ್ರಿಗಸ್ ಅನೇಕ ವರ್ಷಗಳ ಹಿಂದೆಯೇ ಆಫ್ಘಾನಿಸ್ಥಾನಕ್ಕೆ ತೆರಳಿದ್ದು, ಬಾಮಿಯಾನ್ ಪ್ರಾಂತ್ಯದಲ್ಲಿ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆದು ಆಡಳಿತ ಕೈವಶ ಮಾಡಿಕೊಂಡ ನಂತರ ಭಾರತಕ್ಕೆ ಆಗಮಿಸಲು ಅವರು ಮುಂದಾಗಿದ್ದರು. ತಾಲಿಬಾನ್ ಉಗ್ರರು ವಿಮಾನ ನಿಲ್ದಾಣ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಉಳಿದುಕೊಂಡು ಸುರಕ್ಷಿತ ಪ್ರದೇಶಕ್ಕೆ ತೆರಳಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.