ಕಾಬೂಲ್: ಇಡೀ ಆಫ್ಘಾನಿಸ್ಥಾನವನ್ನೇ ವಶಕ್ಕೆ ಪಡೆದು ತಮ್ಮದೇ ಆಡಳಿತದ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿರುವ ತಾಲಿಬಾನ್ ಗಳಿಗೆ ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ಶಾಕ್ ನೀಡಿದ್ದಾನೆ.
ಪಂಜಶೀರ್ ಕಣಿವೆಯನ್ನು ತಾಲಿಬಾನಿಗಳಿಗೆ ಬಿಟ್ಟುಕೊಡುವುದಿಲ್ಲ. ಕಣಿವೆಯನ್ನು ವಶಕ್ಕೆ ಪಡೆಯಲು ತಾಲಿಬಾನಿಗಳು ಪ್ರಯತ್ನಿಸಿದರೆ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಅಹಮ್ಮದ್ ಮಸೂದ್ ಖಡಕ್ ಸಂದೇಶ ರವಾನಿಸಿದ್ದಾರೆ.
ಪಂಜಶೀರ್ ಕಣಿವೆಯನ್ನು ನಾವು ತಾಲಿಬಾನಿಗಳಿಗೆ ಹಸ್ತಾಂತರಿಸುವುದಿಲ್ಲ. ಉಗ್ರಗಾಮಿಗಳ ಗುಂಪು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ನಮ್ಮ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಮ್ಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಬಂಡುಕೋರರ ನಾಯಕ ಅಹಮದ್ ಮಸೂದ್ ಹೇಳಿದ್ದು, ಅಗತ್ಯವಾದರೆ ದಂಡೆತ್ತಿ ಬರುತ್ತಿರುವ ತಾಲಿಬಾನ್ ಗಳೊಂದಿಗೆ ಯುದ್ಧ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಪಂಜಶೀರ್ ನಲ್ಲಿ ಪ್ರತಿರೋಧ ಹೆಚ್ಚಾಗುತ್ತಿದ್ದಂತೆ ಬಲಪ್ರಯೋಗ ಮಾಡಲು ಮುಂದಾಗಿರುವ ತಾಲಿಬಾನ್ ಹೆಚ್ಚುವರಿ ತಾಲಿಬಾನ್ ಯೋಧರನ್ನು ಕಳುಹಿಸಲಾಗಿದೆ.