ಕಾಬೂಲ್: ತಾಲಿಬಾನ್ ಆಳ್ವಿಕೆಯ ವಿರುದ್ಧ ಪ್ರತಿರೋಧ ತೋರಬೇಕು ಎಂದು ಆಫ್ಘಾನಿಸ್ತಾನದ NRF ನಾಯಕ ಅಹಮದ್ ಮಸೂದ್ ಕರೆ ನೀಡಿದ್ದಾರೆ.
ಉಲೇಮಾ ಕೌನ್ಸಿಲ್ ಗೆ ಗೌರವ ನೀಡಿ ಯುದ್ಧವನ್ನು ನಿಲ್ಲಿಸಿದ್ದೆವು. ಆದರೆ, ತಾಲಿಬಾನ್ ಉಲೇಮಾ ಕೌನ್ಸಿಲ್ ಗೆ ಗೌರವ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಮೂಲಕ ತಾಲಿಬಾನ್ ಅನ್ನು ತನ್ನನಿಜ ಬಣ್ಣ ತೋರಿಸಿದೆ. ಶರಿಯಾ ಮತ್ತು ಕುರಾನ್ ಮೇಲೆ ತಾಲಿಬಾನ್ ನಂಬಿಕೆ ಹೊಂದಿಲ್ಲ. ಉಲೇಮಾ ಕೌನ್ಸಿಲ್ ನಿರ್ಣಯದ ನಂತರ ದಾಳಿ ನಡೆಸಲಾಗಿದೆ. ನಮ್ಮ ಜನರ ಮೇಲೆ ತೀವ್ರವಾದ ದಾಳಿಯನ್ನು ನಡೆಸಿದ್ದಾರೆ. ಇದರಿಂದ ನನ್ನ ಕುಟುಂಬದ ಹತ್ತಿರದ ಸದಸ್ಯರು ಮೃತಪಟ್ಟಿದ್ದಾರೆ. ನಮ್ಮ ಹತ್ತಿರದವರ ಸಾವಿನಿಂದ ನಾವು ದುರ್ಬಲರಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ನೈತಿಕ ಸ್ಥೈರ್ಯ ಕುಸಿಯುವುದಿಲ್ಲ ಎಂಬ ಭರವಸೆ ನೀಡುತ್ತೇನೆ. ಆಫ್ಘಾನಿಸ್ತಾನ ಜನತೆ ತಾಲಿಬಾನ್ ಗೆ ವಿರೋಧವನ್ನು ತೋರಬೇಕು. ಪ್ರತಿರೋಧ ತೋರುವವರ ಜೊತೆಗೆ ನಾವು ಇರುತ್ತೇವೆ. ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವವರ ಜೊತೆಗೆ ನಾವು ಇರುತ್ತೇವೆ. ಪ್ರತಿಭಟನೆ ನಡೆಸುವವರನ್ನು ಬೆಂಬಲಿಸುತ್ತೇವೆ ಎಂದು ಅಹಮ್ಮದ್ ಮಸೂದ್ ಹೇಳಿದ್ದಾರೆ.