ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಆಗಸ್ಟ್ ಆರಂಭದಿಂದಲೂ ಅಫ್ಘಾನಿಸ್ತಾನ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜನರು ಗೂಗಲ್ ಮೊರೆ ಹೋಗ್ತಾರೆ.
ಅಫ್ಘಾನಿಸ್ತಾನದ ವಿಷ್ಯದಲ್ಲೂ ಇದೇ ಆಗಿದೆ. ಅಫ್ಘಾನಿಸ್ತಾನವು ಗೂಗಲ್ನಲ್ಲಿ ಅಗ್ರ ಟ್ರೆಂಡಿಂಗ್ ವಿಷಯವಾಗಿದೆ.
ಗೂಗಲ್ ಟ್ರೆಂಡ್ ಇತಿಹಾಸದಲ್ಲಿ ಅಫ್ಘಾನಿಸ್ತಾನ, ಪ್ರಸ್ತುತ ಎಲ್ಲ ಸಮಯಗಳಿಗಿಂತ ಹೆಚ್ಚು ಹುಡುಕಲ್ಪಟ್ಟ ದೇಶವಾಗಿದೆ. ಆಗಸ್ಟ್ 15 ರಂದು ಅಫ್ಘಾನ್ ದೇಶವನ್ನು ತಾಲಿಬಾನ್ ವಶಕ್ಕೆ ಪಡೆದಿತ್ತು. ಅಫ್ಘಾನಿಸ್ತಾನದ ಪರಿಸ್ಥಿತಿ ಮುಂದೇನು ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.
ಅಫ್ಘಾನಿಸ್ತಾನ ಮಾತ್ರವಲ್ಲ ತಾಲಿಬಾನ್ ಕೂಡ ಸದ್ಯ ಟ್ರೆಂಡ್ ನಲ್ಲಿರುವ ವಿಷ್ಯವಾಗಿದೆ. ಗೂಗಲ್ ನಲ್ಲಿ ಮಾತ್ರವಲ್ಲ ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಜನರು ತಾಲಿಬಾನ್ ಹಾಗೂ ಅಫ್ಘಾನಿಸ್ತಾನದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಗೂಗಲ್ ಟ್ರೆಂಡ್ ನ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 2004ರಿಂದ 2021ರವರೆಗಿನ ಗ್ರಾಫಿಕ್ಸ್ ನೋಡಬಹುದು.
ಗೂಗಲ್ ನಲ್ಲಿ ಯಾವ ವಿಷ್ಯ ಟ್ರೆಂಡ್ ಆಗಿದೆ ಎಂಬುದನ್ನು ಪಟ್ಟಿ ಮಾಡಲಾಗಿದೆ. ಏರ್ಬಿಎನ್ಬಿ ಅಫ್ಘಾನ್ ನಿರಾಶ್ರಿತರು, ಟ್ರಂಪ್ ಸೆಂಡಿಂಗ್ ಪ್ಲೇನ್ ಟು ಅಫ್ಘಾನಿಸ್ತಾನ್, ಜೊಕೊ ವಿಲ್ಲಿಂಕ್ ವಿಡಿಯೋ ಅಫ್ಘಾನಿಸ್ತಾನ್, ಸೇಠ್ ಮೌಲ್ಟನ್ ಅಫ್ಘಾನಿಸ್ತಾನ್ ಆಂಡ್ ಸೇಠ್ ಮೌಲ್ಟನ್ ವಿಷ್ಯಗಳು ಟ್ರೆಂಡ್ಸ್ ನಲ್ಲಿವೆ.