
ಬ್ರಿಡ್ಜ್ ಟೌನ್: ಬಾರ್ಬಡೋಸ್ ಬ್ರಿಡ್ಜ್ ಟೌನ್ ನ ಕೆನ್ನಿಂಗ್ ಸ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ ಭರ್ಜರಿ ಜಯಗಳಿಸಿದೆ.
ಸೂಪರ್ 8 ಪಂದ್ಯದಲ್ಲಿ ಭಾರತ ತಂಡ 47 ರನ್ ಅಂತರದಿಂದ ಆಫ್ಗಾನಿಸ್ತಾನ ಮಣಿಸಿದೆ. ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಸೂರ್ಯಕುಮಾರ್ 53, ಹಾರ್ದಿಕ್ ಪಾಂಡ್ಯ 32, ವಿರಾಟ್ ಕೊಹ್ಲಿ 24 ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಫಾರೂಕ್ ಫಾರೂಕಿ 3, ರಶೀದ್ ಖಾನ್ 3 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ 20 ಓವರ್ ಗಳಲ್ಲಿ 134 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಅಜ್ಮತ್ ಉಲ್ಲಾ ಒಮರಾಜಿ 26 ರನ್ ಗಳಿಸಿದರು. ಭಾರತದ ಪರ ಆರ್ಶ್ ದೀಪ್ ಸಿಂಗ್ 3, ಜಸ್ ಪ್ರೀತ್ ಬೂಮ್ರ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.