ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಹಿಸಿಕೊಂಡಾಗಿನಿಂದಲೂ ಈ ದೇಶದ ಕ್ರಿಕೆಟ್ ನಲ್ಲಿ ಕರಿ ಮೋಡ ಆವರಿಸಿತ್ತು. ಆದರೀಗ ಅಫ್ಘನ್ ಕ್ರಿಕೆಟಿಗರಿಗೆ ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಹಾಗೂ ಉದ್ದೇಶಿತ ಭಾರತದಲ್ಲಿ ಆಡಲಿರುವ ಸರಣಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಮೀದ್ ಶಿನ್ವಾರಿ, ಟೆಸ್ಟ್ ಮ್ಯಾಚ್ ಗಾಗಿ ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಆಡುವ ಸಾಧ್ಯತೆಯಿದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಲೈಸೆನ್ಸ್ ರದ್ದಾದರೂ ಕಾರು ಚಾಲನೆ: ತಪ್ಪೊಪ್ಪಿಕೊಂಡ ಆಟಗಾರ
“ತಾಲಿಬಾನ್ ಸರಕಾರವು ಕ್ರಿಕೆಟ್ ಅನ್ನು ಬೆಂಬಲಿಸುತ್ತಿದೆ. ನಮ್ಮ ಎಲ್ಲಾ ಕ್ರಿಕೆಟ್ ವೇಳಾಪಟ್ಟಿಯಂತೆ ನಡೆಯಲಿದೆ. ತಾಲಿಬಾನ್ ಸಾಂಸ್ಕೃತಿಕ ಆಯೋಗದ ವಕ್ತಾರರು ನಮಗೆ ತಿಳಿಸಿದ್ದು, ತಾಲಿಬಾನ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಬೆಂಬಲಿಸುತ್ತದೆ. ಹಾಗೂ 2022ರ ಮೊದಲ ತ್ರೈಮಾಸಿಕದಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಬೆಂಬಲಿಸುತ್ತದೆ” ಎಂದು ಶಿನ್ವಾರಿ ಹೇಳಿದರು.
ಅಫ್ಘನ್ ತಾಲಿಬಾನ್ ವಶದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಭವಿಷ್ಯದ ಬಗ್ಗೆ ಗೊಂದಲ ಕಾಡಿತ್ತು. ಆದರೀಗ ದೇಶದ ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ಹೀಗಾಗಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ತಾಲಿಬಾನ್ ಹಸಿರು ನಿಶಾನೆ ತೋರಿದೆ.