ತಾಲಿಬಾನಿಗಳ ಕ್ರೌರ್ಯದಿಂದ ಅಕ್ಷರಶಃ ನರಕವಾಗಿರುವ ಅಫ್ಘಾನಿಸ್ತಾನದಿಂದ ತಮ್ಮ ಪೋಷಕರನ್ನು ಆದಷ್ಟು ಬೇಗ ಭಾರತದಂತಹ ಸುರಕ್ಷಿತ ರಾಷ್ಟ್ರಕ್ಕೆ ಕರೆತರುವಂತೆ ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಈ ಸಂಬಂಧ ಆಫ್ಘನ್ ವಿದ್ಯಾರ್ಥಿಗಳು ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದಾರೆ ಕೂಡ. ಆಫ್ಘನ್ ಬಿಕ್ಕಟ್ಟು ಸಂಬಂಧ ಕನ್ನಡಿಗರ ರಕ್ಷಣೆಯ ಉಸ್ತುವಾರಿಯನ್ನು ವಹಿಸಲಾಗಿರುವ ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅಫ್ಘಾನಿಸ್ತಾನ ಬಿಕ್ಕಟ್ಟು: ಪ್ರಧಾನಿ ಮೋದಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮಹತ್ವದ ಮಾತುಕತೆ
“ಈಗಾಗಲೇ ಕೇಂದ್ರ ಸರ್ಕಾರವು ಆನ್ಲೈನ್ ವೀಸಾಗೆ ಅವಕಾಶ ಮಾಡಿಕೊಟ್ಟಿದೆ. ಆಫ್ಘನ್ ವಿದ್ಯಾರ್ಥಿಗಳ ಪೋಷಕರು ಇದರ ಸೌಲಭ್ಯ ಪಡೆದರೆ, ಖಂಡಿತ ಸುರಕ್ಷಿತವಾಗಿ ಭಾರತಕ್ಕೆ ಬಂದು ಮಕ್ಕಳನ್ನು ಕಾಣಬಹುದು. ವಿದೇಶದಿಂದ ಒಬ್ಬರನ್ನು ಕರೆತರುವ ವಿಚಾರ ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರಕಾರ ಶಿಫಾರಸು ಮಾಡಬಹುದಷ್ಟೇ” ಎಂದಿದ್ದಾರೆ.
ವಿದೇಶಿಗಳ ಪ್ರಾದೇಶಿಕ ನೋಂದಣಿ ಕಚೇರಿ ಅನ್ವಯ 339 ಆಫ್ಘನ್ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆ ಪೈಕಿ 202 ಮಂದಿ ಬೆಂಗಳೂರಿನಲ್ಲಿ ಇದ್ದಾರೆ.