ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು, ನೂರಾರು ತಾಲಿಬಾನ್ ಬಂಡುಕೋರರು ಪಂಜಶೀರ್ ಕಣಿವೆಯತ್ತ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನೂರಾರು ಮುಜಾಹಿದ್ದೀನ್ ಗಳು ಪಂಜಶೀರ್ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸಲು ತೆರಳಿದೆ. ಅಘ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧದ ನಾಯಕ ಅಹ್ಮದ್ ಮಸೂದ್ ಶರಣಾಗುವಂತೆ ತಾಲಿಬಾನ್ ಆದೇಶಿಸಿದೆ ಎಂದು ತಿಳಿದು ಬಂದಿದೆ. ಆದರೆ ಅಹ್ಮದ್ ಮಸೂದ್ ಶರಣಾಗಲು ನಿರಾಕರಿಸಿದ್ದು, ಸ್ಥಳೀಯರ ಜೊತೆ ಸೇರಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.
ಆರ್ಯ ಈಡಿಗ ನಾರಾಯಣ ಗುರುಗಳ ಅವಹೇಳನ: ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು
ಬಂಡುಕೋರರ ಗುಂಪು ತಾಲಿಬಾನ್ ಜೊತೆ ಮಾತುಕತೆ ನಡೆಸಲು ಬಯಸಿತ್ತು, ಆದರೆ ಇದನ್ನು ತಾಲಿಬಾನ್ ನಿರಾಕರಿಸಿದೆ. ಪ್ರಸ್ತುತ ಈ ಭದ್ರಕೋಟೆಯ ಮೇಲೆ ದಾಳಿ ಮಾಡಲು ತಾಲಿಬಾನ್ ಆದೇಶಕ್ಕಾಗಿ ಕಾಯುತ್ತಿದೆ. ಅಶ್ರಫ್ ಘನಿ ಸರಕಾರದಲ್ಲಿದ್ದ ಜನರಲ್ ಬಿಸ್ಮಿಲ್ಲಾ ಅವರು ತಾಲಿಬಾನ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧ ಎಂದು ಹೇಳಿದ್ದಾರೆ.
ಇನ್ನು ಮಸೂದ್ ಹಾಗೂ ಬೆಂಬಲಿಗರು ಶಾಂತಿಯುತ ರೀತಿಯಲ್ಲಿ ಪರಿಹಾರ ಬಯಸಿದ್ದು, ತಾಲಿಬಾನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.