ನವದೆಹಲಿ: ತಾಲಿಬಾನ್ ಉಗ್ರರ ವಶದಲ್ಲಿರುವ ಆಫ್ಘಾನಿಸ್ಥಾನದಿಂದ ಭಾರತೀಯರನ್ನು ಕರೆತರುವುದು ಸುಲಭವೇನೂ ಆಗಿರಲಿಲ್ಲ.
ಭಾರತ ಸರ್ಕಾರ ತನ್ನ ಪ್ರಜೆಗಳನ್ನು ರಕ್ಷಿಸಿದ ಕ್ಷಣವಂತೂ ರಣರೋಚಕವಾಗಿತ್ತು. ತಾಲಿಬಾನಿಗಳ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಗಿದೆ. ಅಧಿಕಾರಿಗಳು ದೆಹಲಿಯಲ್ಲಿ ಕುಳಿತು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್, ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಅವರೊಂದಿಗೆ ಮಾತನಾಡಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಅಮೆರಿಕ ಭದ್ರತಾ ಪಡೆಗಳ ವಶದಲ್ಲಿದ್ದು, ಅವರ ನೆರವಿನೊಂದಿಗೆ ಭಾರತೀಯರನ್ನು ಹೊತ್ತ ಸಿ -17 ವಾಯುಸೇನೆ ವಿಮಾನ ಭಾರತಕ್ಕೆ ಬಂದಿದೆ.
ಭಾರತೀಯರು ಕಾಬೂಲ್ ವಿಮಾನ ನಿಲ್ದಾಣಕ್ಕೆ ತಲುಪಲು ಸ್ಥಳೀಯರು ನೆರವಾಗಿದ್ದರೆ. ಭಾರತೀಯರಿದ್ದ ವಾಹನಗಳ ಹಿಂದೆ ಮುಂದೆ ಸ್ಥಳೀಯರ ವಾಹನಗಳು ಇದ್ದು, ರಕ್ಷಣೆ ನೀಡಿವೆ. ಮೊದಲ ಮತ್ತು ಕೊನೆಯ ವಾಹನದಲ್ಲಿ ಸ್ಥಳೀಯರು ಇದ್ದು, ನಡುವೆ ಭಾರತೀಯರಿದ್ದ ವಾಹನಗಳಿಗೆ ರಕ್ಷಣೆ ನೀಡಲಾಗಿದೆ. ಚೆಕ್ಪೋಸ್ಟ್ ಗಳಲ್ಲಿ ತಾಲಿಬಾನ್ ಉಗ್ರರಿಗೆ ಮನವರಿಕೆ ಮಾಡಿ ತೊಂದರೆ ಆಗದಂತೆ ಪ್ಲಾನ್ ಏರ್ಪೋರ್ಟ್ ವರೆಗೆ ಕಾಬೂಲ್ ನ ಸ್ಥಳೀಯರು ಬೆಂಗಾವಲು ನೀಡಿದ್ದಾರೆ.
ತಾಲಿಬಾನಿಗಳು ಹೇರಿದ್ದ ನೈಟ್ ಕರ್ಫ್ಯೂ ನಡುವೆಯೂ ಎಲ್ಲರನ್ನೂ ರಕ್ಷಿಸಿ ಕರೆತರಲಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಬಂದಿದ್ದ ಪ್ರಜೆಗಳೆಲ್ಲರೂ ಸೇಫ್ ಆಗಿದ್ದಾರೆ.. ಸ್ಥಳೀಯರು ಭಾರತೀಯರು ಕಾಬೂಲ್ ಏರ್ಪೋರ್ಟ್ ತಲುಪಲು ನೆರವಾಗಿದ್ದಾರೆ.
ಎಲ್ಲಾ ಭಾರತೀಯರನ್ನು 14 ವಾಹನಗಳಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿದೆ. 14 ಬುಲೆಟ್ ಪ್ರೂಫ್ ವಾಹನಗಳಲ್ಲಿ ಶಸ್ತ್ರಸ್ತ್ರಧಾರಿ ಐಟಿಬಿಪಿ ಸಿಬ್ಬಂದಿ ಇದ್ದರು. ಹದಿನೈದು ಚೆಕ್ಪೋಸ್ಟ್ ಗಳನ್ನು ದಾಟಿ ಕಾಬೂ ವಿಮಾನನಿಲ್ದಾಣಕ್ಕೆ ಭಾರತೀಯರು ಬಂದಿದ್ದಾರೆ.
ಅಮೆರಿಕ ಸೇನೆಗೆ ಭಾರತೀಯರು ಬರುತ್ತಾರೆ ಎನ್ನುವ ಮಾಹಿತಿ ಇತ್ತು. ಎಷ್ಟು ಹೊತ್ತಿಗೆ? ಹೇಗೆ? ಎಷ್ಟು ಜನ ಎನ್ನುವುದನ್ನು ಗೌಪ್ಯವಾಗಿಡಲಾಗಿತ್ತು. ಏರ್ಪೋರ್ಟ್ ಗೆ ಭಾರತೀಯರ ಪ್ರಯಾಣಕ್ಕೆ ಮಧ್ಯರಾತ್ರಿ ಸಮಯ ನಿಗದಿ ಮಾಡಲಾಗಿತ್ತು. ರಾಯಭಾರ ಕಚೇರಿಯಿಂದ ಹೋರಾಟ ಪ್ರತಿ ನಿಮಿಷಕ್ಕೂ ದೆಹಲಿಯ ಕಂಟ್ರೋಲ್ ರೂಂಗೆ ಸೈನಿಕರು ಸಂದೇಶ ರವಾನಿಸುತ್ತಿದ್ದರು.
ಭಾರತೀಯರ ರಕ್ಷಣೆಗೆ ದೆಹಲಿಯಲ್ಲಿ ಕುಳಿತು ರಣತಂತ್ರ ಹೆಣೆಯಲಾಗಿತ್ತು. ಇಪ್ಪತ್ತು ನಿಮಿಷದ ದಾರಿಯನ್ನು ತಲುಪಲು ತೆಗೆದುಕೊಂಡಿದ್ದು 1 ಗಂಟೆ. ಇರಾನ್ ವಾಯುಪ್ರದೇಶ ಬಳಸಿ ಸಿ -17 ಏರ್ ಫೋರ್ಸ್ ವಿಮಾನ ಕಾಬೂಲ್ ತಲುಪಿತ್ತು ಎನ್ನಲಾಗಿದೆ.