ತಾಲಿಬಾನಿ ಪಡೆಗಳ ಮುಷ್ಟಿಗೆ ಸಿಲುಕಿ ಎಲ್ಲೆಲ್ಲೂ ಗೊಂದಲ ಹಾಗೂ ಭೀತಿ ನೆಲೆಸಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ.
“ಸದ್ಯದ ಪರಿಸ್ಥಿತಿಗಳನ್ನು ಪರಿಗಣಿಸಿ, ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಹಾಗೂ ಭಾರತೀಯ ಸಿಬ್ಬಂದಿ ಶೀಘ್ರವೇ ಭಾರತಕ್ಕೆ ಮರಳಲಿದ್ದಾರೆ,’’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದರು.
ಕಾಬೂಲ್ ನಗರವನ್ನು ತಾಲಿಬಾನಿ ಪಡೆಗಳು ವಶಕ್ಕೆ ಪಡೆದ ಬಳಿಕ ಪ್ರಾಣಭೀತಿಯಿಂದ ದೇಶ ಬಿಡಲು ಅಫ್ಘಾನಿಸ್ತಾನದ ಜನತೆ ವಿಮಾನ ನಿಲ್ದಾಣಕ್ಕೆ ಮುಗಿಬೀಳುತ್ತಿರುವ ಪರಿಣಾಮ, ಕಾಲ್ತುಳಿತದಿಂದ ಅನೇಕ ಮಂದಿ ಪ್ರಾಣ ಬಿಟ್ಟಿದ್ದಾರೆ. ವಿಮಾನದ ರೆಕ್ಕೆ ಹಿಡಿದು ಕುಳಿತಿದ್ದ ಮಂದಿ ಆಗಸದಿಂದ ಕೆಳಗೆ ಬೀಳುತ್ತಿರುವ ದಾರುಣ ಪರಿಸ್ಥಿತಿಯ ವಿಡಿಯೋಗಳು ವೈರಲ್ ಆಗಿವೆ.