ಕಾಬೂಲ್: ಆಫ್ಘಾನಿಸ್ತಾನದ ವಿವಿಧ ಕಡೆಗಳಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಏರ್ ಸ್ಟ್ರೈಕ್ ನಡೆಸಲಾಗಿದ್ದು 250 ಕ್ಕೂ ಅಧಿಕ ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ.
ಕಾಬೂಲ್, ಕಂದಹಾರ್ ಸೇರಿದಂತೆ 13 ಕಡೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, 24 ಗಂಟೆಯಲ್ಲಿ ಉಗ್ರರ 13 ಕ್ಕೂ ಅಧಿಕ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಉಗ್ರರು ಇತ್ತೀಚೆಗೆ ಪ್ರಾಬಲ್ಯ ಸಾಧಿಸಿದ್ದ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಭಯೋತ್ಪಾದಕರೂ ಗುಂಡಿನ ದಾಳಿಯೊಂದಿಗೆ ಪ್ರತಿರೋಧ ತೋರಿದ್ದು, ಅನೇಕ ನಾಗರಿಕರೂ ಕೂಡ ಸಾವನ್ನಪ್ಪಿದ್ದಾರೆ.