alex Certify ಆಫ್ಘನ್‌ ನಲ್ಲಿ ಇನ್ನು ಟಿವಿ ನಿರೂಪಕಿಯರ ಮುಖದರ್ಶನವಿಲ್ಲ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ಘನ್‌ ನಲ್ಲಿ ಇನ್ನು ಟಿವಿ ನಿರೂಪಕಿಯರ ಮುಖದರ್ಶನವಿಲ್ಲ…..!

ಕಾಬೂಲ್: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನದಲ್ಲಿ ಇನ್ನು ಟಿವಿ ನಿರೂಪಕಿಯರ ಮುಖದರ್ಶನವಿರಲ್ಲ ! ಎಲ್ಲ ಟಿವಿ ನಿರೂಪಕಿಯರು ಮತ್ತು ಇತರೆ ಮಹಿಳೆಯರು ಮುಖ ಮುಚ್ಚಿಕೊಳ್ಳಬೇಕು. ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವಾಗಲೂ ಇದು ಅನ್ವಯ ಎಂದು ತಾಲಿಬಾನ್‌ ಆಡಳಿತ ಕಳೆದ ಬುಧವಾರ ಆದೇಶ ಹೊರಡಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ತಾಲಿಬಾನ್ ಸಚಿವಾಲಯದ ವಕ್ತಾರು ಹೇಳಿದ ಪ್ರಕಾರ, ಹೊಸ ತೀರ್ಪು ಮೇ 21 ರಿಂದ ಜಾರಿಗೆ ಬಂದಿದೆ. ಎರಡು ವಾರಗಳ ಹಿಂದೆ, ಸಾರ್ವಜನಿಕವಾಗಿ ಮುಖ ಮುಸುಕು ಧರಿಸುವಂತೆ ಎಲ್ಲ ಮಹಿಳೆಯರಿಗೆ ನಿರ್ದೇಶಿಸಿತ್ತು ಅಥವಾ ಶಿಕ್ಷೆಯ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿತ್ತು.

ತಾಲಿಬಾನ್, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಮಹಿಳೆಯರ ಮೇಲಿನ ನಿರ್ಬಂಧವನ್ನು ಬಿಗಿಯಾಗುತ್ತ ಸಾಗುತ್ತಿದೆ. ಪುರುಷ ಪೋಷಕರಿಲ್ಲದೆ ಅವರು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಇದರ ಹೊರತಾಗಿ ಹುಡುಗಿಯರ ಮಾಧ್ಯಮಿಕ ಶಾಲೆಗಳನ್ನು ಮುಚ್ಚಲಾಗಿದೆ.

“ ಮುಖ ಮುಚ್ಚಿಕೊಂಡು ಸುದ್ದಿ ಓದುವುದು ಹೇಗೆ ? ಈಗ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಆದರೆ ನಾನು ನನ್ನ ಕುಟುಂಬದ ಅನ್ನದಾತನಾಗಿ ಕೆಲಸ ಮಾಡಬೇಕಾಗಿದೆ. ತಾಲಿಬಾನ್‌ ಆಡಳಿತ ನಮ್ಮ ಅನ್ನವನ್ನು ಕಸಿಯುತ್ತಿದೆ ”ಎಂದು ಮಹಿಳಾ ಟಿವಿ ನಿರೂಪಕಿ ಒಬ್ಬರು ಅಳಲು ತೋಡಿಕೊಂಡಿದ್ದಾರೆ.

ಅಫ್ಘಾನ್ ಮಹಿಳೆಯರ ಮೇಲಿನ ಇತ್ತೀಚಿನ ನಿರ್ಬಂಧವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ, ಅನೇಕರು ಈ ತೀರ್ಪನ್ನು ಉಗ್ರವಾದವನ್ನು ಉತ್ತೇಜಿಸಲು ತಾಲಿಬಾನ್ ಸರ್ಕಾರದ ಮತ್ತೊಂದು ಹೆಜ್ಜೆ ಎಂಬ ಟೀಕೆಯೂ ವ್ಯಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...