alex Certify ತಾಲಿಬಾನ್ ವಿರುದ್ಧ ಬೀದಿಗಿಳಿದ ಅಫ್ಘಾನ್ ಮಹಿಳೆಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನ್ ವಿರುದ್ಧ ಬೀದಿಗಿಳಿದ ಅಫ್ಘಾನ್ ಮಹಿಳೆಯರು..!

ತಾಲಿಬಾನ್ ವಿರುದ್ಧ ಅಫ್ಘಾನ್ ಮಹಿಳೆಯರು ಬೀದಿಗೆ ಇಳಿದಿದ್ದಾರೆ. ಪ್ರಜಾಪ್ರಭುತ್ವ ಸರ್ಕಾರವನ್ನ ಕೆಡವಿ ಅಧಿಕಾರಕ್ಕೇರಿರೊ‌ ತಾಲಿಬಾನ್, ಅಫ್ಘಾನಿಸ್ತಾನದ ಮಹಿಳೆಯರ ಸ್ವತಂತ್ರ ಕಸಿದುಕೊಂಡಿದೆ. ನಮಗೂ ಸಮಾನ ಹಕ್ಕುಗಳನ್ನ ನೀಡಿ ಎಂದು ಸುಮಾರು ಮೂವತ್ತು ಮಹಿಳೆಯರ ಗುಂಪು ಅಫ್ಘಾನ್ ನ ರಾಜಧಾನಿ ಕಾಬುಲ್ ನಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದೆ.

ಜೊತೆಗೆ ತಾಲಿಬಾನ್ ಅಧಿಕಾರಕ್ಕೇರಲು ಸಾಕಷ್ಟು ಅಫ್ಘಾನ್ ಯೋಧರನ್ನ ಹತ್ಯೆ ಮಾಡಿದೆ. ಅಧಿಕಾರಿಗಳು ಹಿಂದಿನ ಯುಎಸ್ ಬೆಂಬಲಿತ ಆಡಳಿತದಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ರಹಸ್ಯವಾಗಿ ಕೊಂದಿದ್ದಾರೆ ಎಂದು ಆರೋಪಿಸಿರುವ ಈ ಮಹಿಳೆಯರ ಗುಂಪು ಮಂಗಳವಾರ ಅಫ್ಘಾನ್ ರಾಜಧಾನಿಯಲ್ಲಿ ಮೆರವಣಿಗೆ ನಡೆಸಿದೆ‌.

‘ಕಾಂಗ್ರೆಸ್​​ಗೆ ಗರ್ಭಪಾತ ಆಗಿದೆ; ಗಂಡೋ – ಹೆಣ್ಣೋ ಗೊತ್ತಿಲ್ಲ’ – ಶಾಸಕ ಎಂಪಿ ರೇಣುಕಾಚಾರ್ಯ ವ್ಯಂಗ್ಯ

ಕಾಬೂಲ್‌ನ ಮಧ್ಯಭಾಗದಲ್ಲಿರುವ ಮಸೀದಿಯೊಂದರ ಬಳಿ ಸುಮಾರು 30 ಮಹಿಳೆಯರು ಜಮಾಯಿಸಿ, ನಮಗೆ ನ್ಯಾಯ ಬೇಕು, “ಜಸ್ಟೀಸ್, ಜಸ್ಟೀಸ್” ಎಂದು ಘೋಷಣೆಗಳನ್ನು ಕೂಗುತ್ತಾ ಕೇವಲ ನೂರು ಮೀಟರ್‌ಗಳಷ್ಟೆ ಮೆರವಣಿಗೆ ಮಾಡಿದ್ದರು. ಅಲ್ಲಿಗೆ ಬಂದ ತಾಲಿಬಾನ್ ಪಡೆ ಅವರನ್ನು ತಕ್ಷಣ ತಡೆಹಿಡಿದು, ಮೆರವಣಿಗೆಗೆ ಬ್ರೇಕ್ ಹಾಕಿದೆ. ‌

ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಹಲವಾರು ಪತ್ರಕರ್ತರನ್ನು ತಾಲಿಬಾನ್ ಪಡೆ ಬಂಧಿಸಿರುವುದಲ್ಲದೆ, ಅವರ ಬಳಿಯಿದ್ದ ಕ್ಯಾಮೆರ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆದು, ಹಿಂದಿರುಗಿಸುವ ಮೊದಲು ಅವರ ಕ್ಯಾಮೆರಾಗಳಿಂದ ಚಿತ್ರಗಳನ್ನು ಅಳಿಸಿ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪ್ರತಿಭಟನೆಗೆ ಆಮಂತ್ರಣ ನೀಡಲಾಗಿತ್ತು, ಅದರ ಪ್ರಕಾರ ತಾಲಿಬಾನ್ ಅಧಿಕಾರಕ್ಕೆ ಬಂದಮೇಲೆ ನಡೆದ , “ಯುವಕರ ನಿಗೂಢ ಹತ್ಯೆಗಳು, ವಿಶೇಷವಾಗಿ ದೇಶದ ಮಾಜಿ ಸೈನಿಕರ ಕೊಲೆಗಳ” ವಿರುದ್ಧ ದ್ವನಿ ಎತ್ತಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...