alex Certify ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ

ನ್ಯೂಯಾರ್ಕ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಅಫ್ಘನ್ ಯುವತಿಯೊಬ್ಬರು ಆ ಊರಿನ ಕುರಿತು ಒಂದೊಳ್ಳೇ ಪೋಸ್ಟ್ ಹಾಕಿದ್ದಾರೆ.

ಶ್ಕುಲಾ ಜದ್ರಾನ್ ಹೆಸರಿನ ಈ ಯುವತಿ ಜಾಗತಿಕ ವಿದ್ಯಮಾನಗಳ ಮೇಲೆ ಮಾಸ್ಟರ್ಸ್ ವ್ಯಾಸಂಗ ಮಾಡುತ್ತಿದ್ದು, ಮಧ್ಯ ರಾತ್ರಿಯ ವೇಳೆ ತಪ್ಪಾದ ಬಸ್ಸೊಂದನ್ನು ಏರಿದ ಸಂದರ್ಭದಲ್ಲಿ ಅಪರಿಚಿತರೊಬ್ಬರು ತಮಗೆ ನೆರವಾದ ಕುರಿತು ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ತಾವು ಹೋಗಬೇಕಾದ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಸ್ಸನ್ನೇರಿದ ಜದ್ರಾನ್‌ಗೆ ಆ ವೇಳೆ ತಮ್ಮ ಮೊಬೈಲ್ ಸ್ವಿಚ್‌ ಆಫ್ ಆಗಿದ್ದು ತಲೆನೋವನ್ನು ಇನ್ನಷ್ಟು ಹೆಚ್ಚಿಸಿತ್ತು. ಅದಲ್ಲದೇ ಆ ವೇಳೆ ಅವರ ಕೈಲಿ ಕ್ಯಾಶ್ ಅಥವಾ ಕಾರ್ಡ್ ಸಹ ಇರಲಿಲ್ಲ.

ಆತಂಕಗೊಂಡಿದ್ದ ತನ್ನ ಬಸ್ಸಿನ ಪ್ರಯಾಣಿಕೆಯನ್ನು ಗಮನಿಸಿದ ಚಾಲಕ ತನ್ನ ಮಾರ್ಗದ ಕೊನೆಯ ನಿಲ್ದಾಣ ತಲುಪಿದ ಬಳಿಕ ಆ ಯುವತಿಯನ್ನು ಆಕೆಯ ಸ್ಥಳಕ್ಕೆ ಅದೇ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಚಾಲಕನ ಈ ಮಾನವೀಯ ನಡೆ ನೆಟ್ಟಿಗರ ಹೃದಯ ಗೆದ್ದಿದೆ.

ತನ್ನ ವಾಸ್ತ್ಯವ್ಯದ ಜಾಗ ತಲುಪುತ್ತಲೇ ಚಾಲಕನಿಗೆ ಹಣ ಕಳುಹಿಸಲು ಜದ್ರಾನ್‌ ಯತ್ನಿಸಿದ್ದಾರೆ. ಆದರೆ ಇದಕ್ಕೆ ಬಿಲ್‌ಕುಲ್ ಒಲ್ಲೆ ಎಂದಿದ್ದಾರೆ ಚಾಲಕ ನೋಯೆಲ್. ಈ ಕುರಿತು ಮಾಡಿದ ಟ್ವೀಟ್‌ನಲ್ಲಿ ನ್ಯೂಯಾರ್ಕ್ ರಸ್ತೆ ಸಾರಿಗೆಯನ್ನು ಟ್ಯಾಗ್ ಮಾಡಿದ ಶ್ಕುಲಾ, ಚಾಲಕನ ಔದಾರ್ಯವನ್ನು ಕೊಂಡಾಡಿದ್ದಾರೆ.

https://twitter.com/ShkulaZadran/status/1670666533905870849?ref_src=twsrc%5Etfw%7Ctwcamp%5Etweetembed%7Ctwterm%5E1670666533905870849%7Ctwgr%5E0c257f5778eacc6c938a8b263d6d4f7aac9e5b21%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fafghan-woman-shares-how-a-stranger-helped-her-in-new-york-in-middle-of-night-4136359

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...