ಕಾಬೂಲ್: ಕಾಬೂಲ್ ಏರ್ಪೋರ್ಟ್ ನಿಂದ ಅಮೆರಿಕ ಸೇನಾ ವಿಮಾನದಲ್ಲಿ ಏರ್ ಲಿಫ್ ಲಿಫ್ಟ್ ಮಾಡುವಾಗ ವಿಮಾನದಲ್ಲಿಯೇ ಆಫ್ಘನ್ ಮಹಿಳೆಗೆ ಹೆರಿಗೆಯಾಗಿದೆ.
ವಿಮಾನದಲ್ಲೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್ ನಲ್ಲಿ ಶನಿವಾರ ಅಮೆರಿಕ ಮಿಲಿಟರಿ ವಿಮಾನದ ಮೂಲಕ ಸ್ಥಳಾಂತರಿಸುವ ವೇಳೆ ಆಫ್ಘಾನಿಸ್ಥಾನದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಮೆರಿಕ ಏರ್ ಫೋರ್ಸ್ ಮಾಹಿತಿ ನೀಡಿದೆ.
ಆಫ್ಘಾನಿಸ್ತಾನದ ತಾಲಿಬಾನಿನ ವಶದಲ್ಲಿರುವ ಪ್ರದೇಶದಿಂದ ಸಿ-17 ವಿಮಾನದಲ್ಲಿ ಸ್ಥಳಾಂತರಿಸಲಾದ ಗರ್ಭಿಣಿಗೆ ಹೆರಿಗೆಯಾಗಿದೆ. ವಿಮಾನ ಜರ್ಮನಿಯ ವಾಯುನೆಲೆಗೆ ತೆರಳುತ್ತಿತ್ತು. ವಿಮಾನ ಎತ್ತರದಲ್ಲಿ ಹಾರುವಾಗ ಕಡಿಮೆ ವಾಯು ಒತ್ತಡವಾಗಿ ಗರ್ಭಿಣಿಗೆ ಹೆರಿಗೆ ನೋವು ಸೇರಿ ತೊಂದರೆ ಕಾಣಿಸಿಕೊಂಡಿದೆ. ವಿಮಾನದ ಕಮಾಂಡರ್ ವಿಮಾನದಲ್ಲಿ ವಾಯುಒತ್ತಡವನ್ನು ಹೆಚ್ಚಿಸಲು ಮತ್ತು ಮಹಿಳೆಯ ಉಳಿಸಲು ವಿಮಾನವನ್ನು ಕೆಳಮಟ್ಟದಲ್ಲಿ ಹಾರಿಸಿ ನೆರವಾಗಿದ್ದಾರೆ. ತಾಯಿ ಮತ್ತು ಮಗುವನ್ನು ರಾಮ್‌ಸ್ಟೈನ್ ಏರ್ ಬೇಸ್ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಫ್ಘಾನಿಸ್ತಾನದಿಂದ ವಲಸೆ ಬಂದವರಿಗೆ ರಾಮ್‌ಸ್ಟೈನ್ ಏರ್ ಬೇಸ್ ಪ್ರಮುಖ ಸಾರಿಗೆ ಕೇಂದ್ರವಾಗಿ ಮಾರ್ಪಟ್ಟಿದೆ.