
“ನಾನು ದೂರುತ್ತಿಲ್ಲ, ಆದರೆ ಕಳೆದ ರಾತ್ರಿಯ ಊಟಕ್ಕೆ ನನಗೆ ಸಿಕ್ಕಿದ್ದು ಇದೇ. ಮುಂದಿನ ಊಟ 12 ಗಂಟೆಗಳ ಬಳಿಕ ಸಿಗಲಿದೆ. ನಿರಾಶ್ರಿತನ ಬದುಕು ಸೇಫ್ ಇರಬಹುದು ಆದರೆ ಯಾವತ್ತೂ ಸುಲಭವಲ್ಲ. ಫೋರ್ಟ್ ಬ್ಲಿಸ್ ಎಲ್ ಪಾಸೋ ಟೆಕ್ಸಾಸ್” ಎಂದು ತಮ್ಮ ತಟ್ಟೆಯಲ್ಲಿದ್ದ ಊಟದ ಚಿತ್ರ ಶೇರ್ ಮಾಡಿಕೊಂಡಿದ್ದಾರೆ 28 ವರ್ಷ ವಯಸ್ಸಿನ ಯುವಕ. ಆತನ ತಟ್ಟೆಯಲ್ಲಿ ಎರಡು ತುಂಡು ಚಿಕನ್, ಎರಡು ಸ್ಲೈಸ್ ಬ್ರೆಡ್ ಹಾಗೂ ಹಣ್ಣುಗಳು ಇದ್ದವು.
ಡೀಸೆಲ್ ಟ್ಯಾಂಕ್ ಸ್ಫೋಟ; ರಸ್ತೆಯಲ್ಲೇ ಹೊತ್ತಿ ಉರಿದ ಲಾರಿಗಳು
ತನ್ನ ಈ ಪೋಸ್ಟ್‌ನಿಂದ ಟ್ರೋಲ್‌ಗೆ ತುತ್ತಾಗುತ್ತೇನೆ ಎಂದು ಈತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ತನಗೆ ಬೇಕಾದಂತೆ ತಿನ್ನುವ ಆಸೆಯಿದ್ದರೆ ಅಫ್ಘಾನಿಸ್ತಾನದಲ್ಲೇ ಇರಬಹುದಿತ್ತಲ್ಲ ಎಂದು ಜರಿದ ನೆಟ್ಟಿಗರು, ಆತ ತನಗೆ ಸಿಕ್ಕಿದ್ದಕ್ಕೆ ಖುಷಿ ಪಡುವುದನ್ನು ಕಲಿತಿಲ್ಲ ಎಂದಿದ್ದಾರೆ.
“ಧನ್ಯವಾದ ಹೇಳುವ ಬದಲಿಗೆ ನೀವು ನಿಮಗೆ ಸಿಕ್ಕ ಊಟದ, ಅದೂ ಉಚಿತವಾಗಿ, ಅದರ ಮೇಲೆ ದೂರುತ್ತಿದ್ದೀರಿ. ನಿಮ್ಮ ದೇಶದಿಂದ ಓಡಿಹೋಗಿ ಎಂದು ನಿಮಗೆ ಹೇಳಿದ್ದಾರು…. ಮುಂದಿನ ಬಾರಿ ಪೂರ್ಣ ಫೋಟೋ ಪೋಸ್ಟ್ ಮಾಡಿ” ಎಂದು ರಹೀಂ ಜ಼ುಯ್ ಹೆಸರಿನ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
“ನೀವು ತೋರಲು ಇಚ್ಛಿಸದ ಬ್ರೆಡ್ ಸ್ಲೈಸ್‌ಗಳನ್ನು ನಾನು ಎಡಬದಿಯಲ್ಲಿ ನೋಡಬಲ್ಲೆ. ನೀವು ದುಬಾರಿಯಾದ ಐಫೋನ್ ಒಂದರಿಂದ ಟ್ವಿಟ್ ಮಾಡುತ್ತಿದ್ದೀರಿ. ನಿಮ್ಮ ದೇಶದಿಂದ ಹೊರಗೆ ಬಂದ ನೀವು ಊಟ ಮಾಡುತ್ತಿರುವಿರಿ. ಜೀವ ಉಳಿಸಿದ ಜನರ ಬಗ್ಗೆ ನೀವು ಧನ್ಯರಾಗಿರಬೇಕು. ಐಫೋನ್ ಎಸೆದು ನಿಮಗೆ ರಕ್ಷಣೆ ಕೊಡುತ್ತಿರುವ ಮಂದಿಗೆ ಧನ್ಯವಾದ ತಿಳಿಸಿ” ಎಂದು ಡಾರ್ಕ್‌ನೈಟ್ ಹೆಸರಿನ ಮತ್ತೊಬ್ಬ ಬಳಕೆದಾರರು ಬುದ್ಧಿ ಹೇಳಿದ್ದಾರೆ.