ಹೆಣ್ಣು ಮಕ್ಕಳಿಗೆ ಶಾಲೆಗೆ ಮರಳುವ ಅವಕಾಶ ಆದಷ್ಟು ಬೇಗ ಕಲ್ಪಿಸಿಕೊಡಲಾಗುವುದು ಎಂದು ತಾಲಿಬಾನ್ ಘೋಷಣೆ ಮಾಡಿದೆ. ತಾಲಿಬಾನ್ ಸಂಪುಟದ ಎಲ್ಲಾ ಸ್ಥಾನಗಳನ್ನು ತುಂಬಿಸಿದ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ.
ನಾನು ವಿಚಾರಗಳನ್ನು ಅಂತಿಮಗೊಳಿಸುತ್ತಿದ್ದೇವೆ, ಇದು ಶೀಘ್ರದಲ್ಲೇ ಚಾಲ್ತಿಗೆ ಬರಲಿದೆ ಎಂದು ತಾಲಿಬಾನ್ ವಕ್ತಾರ ಜಬಾಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ತಾಲಿಬಾನ್ ಶಿಕ್ಷಣ ಸಚಿವಾಲಯವು ಪುರುಷ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಮಾಧ್ಯಮಿಕ ಶಾಲೆಗಳಿಗೆ ಮರಳುವಂತೆ ವಾರಾಂತ್ಯದಲ್ಲಿ ಘೋಷಣೆ ಮಾಡಿತ್ತು. ಈ ವೇಳೆ ತಾಲಿಬಾನ್ ಮಹಿಳಾ ಶಿಕ್ಷಕಿಯರು ಹಾಗೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.
ತಾಲಿಬಾನ್ ಸರ್ಕಾರದ ಆಡಳಿತದ ಬಳಿಕ ಮಹಿಳಾ ವ್ಯವಹಾರಗಳ ಸಚಿವಾಲಯವನ್ನೂ ಬಂದ್ ಮಾಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಮುಜಾಹಿದ್ ನೀಡಿಲ್ಲ. ಈ ಹಿಂದಿನ ತಾಲಿಬಾನ್ ಆಡಳಿತ ಅವಧಿಯಲ್ಲಿದ್ದ ಧಾರ್ಮಿಕ ಸಿದ್ಧಾಂತವನ್ನು ಜಾರಿಗೊಳಿಸಲು ಈ ಇಲಾಖೆಯನ್ನು ಬದಲಾವಣೆ ಮಾಡಲಾಗಿದೆ.