ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ರಾಜಕೀಯವಾಗಿ ಅಧಿಕಾರ ಸ್ಥಾಪಿಸಲು ನಡೆಸುತ್ತಿರುವ ಹಿಂಸಾಚಾರ ಮತ್ತು ಅರಾಜತೆಯಿಂದಾಗಿ ಈಗಾಗಲೇ ಅಲ್ಲಿಯ ಜನರು ವಿದೇಶಗಳಿಗೆ ಓಡಿಹೋಗಲು ಕಾಯುತ್ತಿದ್ದಾರೆ. ಪೂರ್ಣ ರಾಷ್ಟ್ರವೇ ತಾಲಿಬಾನ್ ಉಗ್ರರ ಕೈವಶವಾಗಿ ಹಿಂಸೆಯಿಂದ ತತ್ತರಿಸಿದೆ.
ಉದ್ಯಮಗಳು ಸ್ಥಗಿತಗೊಂಡಿವೆ, ಬೇಸಾಯವಿಲ್ಲ. ಹಾಗಾಗಿ ಉತ್ಪಾದನೆ ಎನ್ನುವುದೇ ಇಲ್ಲದೆಯೇ ಉಗ್ರರು ಹಾಗೂ ಬಾಕಿ ಉಳಿದಿರುವ ಆಫ್ಘನ್ನರು ಹಸಿವಿನಿಂದ ಕಂಗಾಲಾಗುತ್ತಿದ್ದಾರೆ.
BIG NEWS: ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಶಾಸಕ ಎಸ್.ಎ. ರಾಮದಾಸ್
ಭಾರತಕ್ಕೆ ಇಂಗು, ಡ್ರೈಫ್ರೂಟ್ಸ್, ಆರ್ಯುವೇದ ಔಷಧ ತಯಾರಿಕೆ ವಸ್ತುಗಳಲ್ಲಿ ಕೆಲವನ್ನು ರಫ್ತು ಮಾಡುವ ಆಫ್ಘನ್‍ನಲ್ಲಿನ ಈ ಪರಿಸ್ಥಿತಿಯಿಂದಾಗಿ ಬೆಲೆಗಳು ಹೆಚ್ಚುತ್ತಲಿದೆ. ಏಪ್ರಿಕಾಟ್, ದ್ರಾಕ್ಷಿಗಳು, ಪಿಸ್ತಾ, ಬಿರಿಯಾನಿಗೆ ಬಳಕೆಯಾಗುವ ಸಾಂಬಾರ್ ಪದಾರ್ಥಗಳ ಬಹುಪಾಲು ಭಾರತಕ್ಕೆ ರಫ್ತಾಗುವುದು ಅಫ್ಘಾನಿಸ್ತಾನದಿಂದಲೇ. ಇವುಗಳ ಕೊರತೆಯಿಂದಾಗಿ, ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆ ಆಗುತ್ತಿವೆ. ಈಗಾಗಲೇ ಶೇ. 15ರಷ್ಟು ಹೆಚ್ಚಳವಾಗಿರುವ ದ್ರಾಕ್ಷಿಯ ಬೆಲೆಯು ಗ್ರಾಹಕರ ಜೇಬು ಸುಡುತ್ತಿದೆ.