ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮುಸ್ಲಿಂರು ಮದ್ಯ ಮಾರುವುದು ಹಾಗೂ ತಯಾರಿಸುವುದು ನಿಷೇಧ ಎಂದು ತಾಲಿಬಾನ್ ಕಟ್ಟುನಿಟ್ಟಾಗಿ ಹೇಳಿ, ಮದ್ಯ ವಶಪಡಿಸಿಕೊಂಡು ಕಾಲುವೆಗೆ ಸುರಿದಿದೆ.
ಸದ್ಯ ಈ ಕುರಿತು ಅಲ್ಲಿನ ಗುಪ್ತಚರ ಪ್ರಧಾನ ನಿರ್ದೇಶನಾಲಯ ವಿಡಿಯೋ ಬಿಡುಗಡೆ ಮಾಡಿದ್ದು, ಮದ್ಯ ವಶಪಡಿಸಿಕೊಂಡು ಅದನ್ನು ಕಾಲುವೆಗೆ ಸುರಿಯಲಾಗಿದೆ. ಅಲ್ಲಿನ ಗುಪ್ತಚರ ಅಧಿಕಾರಿಗಳು ಹಲವೆಡೆ ದಾಳಿ ನಡೆಸಿ ಮದ್ಯದ ಹಲವಾರು ಬಾರೆಲ್ ಗಳನ್ನು ವಶಕ್ಕೆ ಪಡೆದಿದೆ. ಅಲ್ಲದೇ, ಮೂವರು ಡೀಲರ್ ಗಳನ್ನು ಕೂಡ ಬಂಧಿಸಲಾಗಿದೆ ಎನ್ನಲಾಗಿದೆ.
ಸದ್ಯದ ಮಾಹಿತಿಯಂತೆ ಅಫ್ಘಾನಿಸ್ತಾನದಲ್ಲಿ ಹೀಗೆ ವಶಪಡಿಸಿಕೊಂಡ ಸುಮಾರು 3 ಸಾವಿರ ಲೀಟರ್ ಮದ್ಯ ಕಾಲುವೆಗೆ ಸುರಿಯಲಾಗಿದೆ. ಅಲ್ಲದೇ, ಆಲ್ಕೋಹಾಲ್ ಮಾರಾಟವನ್ನು ಸರ್ಕಾರ ರದ್ದುಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಆಡಳಿತದ ಸಂದರ್ಭದಲ್ಲಿ ಮದ್ಯ ಮರಾಟ ಹಾಗೂ ಸೇವನೆಯನ್ನು ನಿಷೇಧಿಸಲಾಗಿತ್ತು. ಇದು ಮುಸ್ಲಿಂ ಕಟ್ಟುಪಾಡುಗಳಿಗೆ ವಿರೋಧ ಎಂದು ಹೇಳಲಾಗಿತ್ತು. ಸದ್ಯ ಮತ್ತೆ ಅಫ್ಘಾನಿಸ್ತಾನ್ ವಶಪಡಿಸಿಕೊಂಡಿರುವ ತಾಲಿಬಾನ್ ಈಗ ಕಟ್ಟುನಿಟ್ಟಾಗಿ ಮದ್ಯ ನಿಷೇಧ ಮಾಡಲಾಗಿದೆ ಎಂದು ಹೇಳಿದೆ.