ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿದ ಅಭ್ಯರ್ಥಿಗಳ ಅಫಿಡವೀಟ್ಗಳನ್ನು ನಾಮಪತ್ರ ಸಲ್ಲಿಸಿದ ದಿನದಂದೇ ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ದಲ್ಲಿ ಪ್ರಕಟಿಸಲಿದ್ದು, ಸಾರ್ವಜನಿಕರು ವೀಕ್ಷಿಸಬಹುದು.
ಭಾರತ ಚುನಾವಣಾ ಆಯೋಗದ ಸೂಚನೆಗಳ ಅನ್ವಯ, 11-ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ವೇಳಾಪಟ್ಟಿಯನ್ವಯ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯು ಏಪ್ರಿಲ್ 12, 2024 ರಿಂದ ಪ್ರಾರಂಭವಾಗಿದೆ.
ಅಭ್ಯರ್ಥಿಗಳು ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿದ (ನಮೂನೆ-26) ಅಫಿಡವೀಟ್ಗಳನ್ನು, ನಾಮಪತ್ರ ಸಲ್ಲಿಸಿದ ದಿನಾಂಕದಂದೇ ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾಫಲಕದಲ್ಲಿ ಹಾಗೂ ಭಾರತ ಚುನಾವಣಾ ಆಯೋಗದ ವೆಬ್ಸೈಟ್ https://affidavit.eci.gov.in ನಲ್ಲಿ ಪ್ರಕಟಿಸಲಾಗುತ್ತಿದೆ.
ಈ ವೆಬ್ಸೈಟ್ದಲ್ಲಿ ಕ್ಯಾಂಡಿಡೆಟ್ ಅಫಿಡವೀಟ್ ಮ್ಯಾನೇಜ್ಮೆಂಟ್(Candidate Affidavit Management) ಪೇಜ್ನಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡು, ನಂತರ ಧಾರವಾಡ ಲೋಕಸಭಾ ಮತಕ್ಷೇತ್ರ(Select State-Karnataka; Select Constituency-Dharwad) ಆಯ್ಕೆ ಮಾಡಿಕೊಂಡು, ಪಿಲ್ಟರ್(Filter)ಬಟನ್ ಒತ್ತುವ ಮೂಲಕ ನಾಮಪತ್ರದೊಂದಿಗೆ ಅಭ್ಯರ್ಥಿಯು ಸಲ್ಲಿಸಿದ ಅಫಿಡವೀಟ್ ಅನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.