ಮಂಡ್ಯ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೆಆರ್ಎಸ್ ಗ್ರಾಮದಲ್ಲಿ ನಡೆದಿದೆ.
ಬೇಕರಿ ಮಾಲೀಕ ಚೇತನ್(40) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕೆಆರ್ಎಸ್ ಗ್ರಾಮದಲ್ಲಿ ಚೇತನ್ ನನ್ನು ಸಂತೋಷ್ ಮತ್ತು ಸಹಚರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ಚೇತನ್ ಕೆಆರ್ ನಗರ ಮೂಲದ ನಿವಾಸಿಯಾಗಿದ್ದಾನೆ. ಕೆಆರ್ಎಸ್ ಗ್ರಾಮದಲ್ಲಿ ಏಳೆಂಟು ವರ್ಷಗಳಿಂದ ಚೇತನ್ ಬೇಕರಿ ನಡೆಸುತ್ತಿದ್ದ. ಆರೋಪಿ ಸಂತೋಷನ ಪ್ರೇಯಸಿ ಜೊತೆಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.
ಇದೇ ವಿಚಾರಕ್ಕೆ ಚೇತನ್ ಮತ್ತು ಸಂತೋಷ್ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಕೊನೆಗೆ ಚೇತನ್ ಕೊಲೆ ಮಾಡಲು ಆರೋಪಿ ಸಂತೋಷ್ ನಿರ್ಧರಿಸಿದ್ದ. ನಿನ್ನೆ ಸಂಜೆ ಬೇಕರಿ ಮುಂಭಾಗವೇ ಚೇತನ್ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಳಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.