ಹಾಸನ: ಅಕ್ರಮ ಸಂಬಂಧ ಆರೋಪದ ಹಿನ್ನಲೆಯಲ್ಲಿ ಸ್ನೇಹಿತರಿಂದಲೇ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಣನೂರು ಗ್ರಾಮದ ಲಾಡ್ಜ್ ಗೆ ಕರೆಸಿಕೊಂಡು ಹರೀಶ್ ನನ್ನು ಕೊಲೆ ಮಾಡಲಾಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ ಏಳನೇ ಹೊಸಕೋಟೆ ಗ್ರಾಮದ ಹರೀಶ್ ಕೊಲೆಯಾದ ವ್ಯಕ್ತಿ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮದ ಹರೀಶನನ್ನು ಲಕ್ಷ್ಮಣ್, ದಿಲೀಪ್, ಸುಶ್ಮಿತಾ ಕೊಲೆ ಮಾಡಿದ್ದಾರೆನ್ನಲಾಗಿದೆ.
ಲಾಡ್ಜಿನಲ್ಲಿ ಮಾತುಕತೆಗೆ ಕರೆಸಿಕೊಂಡು ಹರೀಶನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರೂಮ್ ನಿಂದ ಜೋರಾಗಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಬಾಗಿಲು ಕ್ಲೋಸ್ ಮಾಡಲಾಗಿದೆ. ರೂಮ್ ನಲ್ಲಿದ್ದ ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.