
ಬೆಂಗಳೂರು: ಅನೈತಿಕ ಸಂಬಂಧ ಶಂಕೆಯಿಂದ ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೊಡತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚಿತ್ರದುರ್ಗ ಮೂಲದ ಕಿಶೋರ್ ನನ್ನು ಸತೀಶ್ ರೆಡ್ಡಿ ಕೊಲೆ ಮಾಡಿದ್ದಾನೆ. ಸತೀಶ್ ರೆಡ್ಡಿ ಪತ್ನಿಯ ಜೊತೆಗೆ ಕಿಶೋರ್ ಅನೈತಿಕ ಸಂಬಂಧ ಹೊಂದಿರುವ ಶಂಕೆ ಹಿನ್ನಲೆಯಲ್ಲಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ನಿನ್ನೆ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ಕಿಶೋರ್ ಕೊಲೆ ಮಾಡಲಾಗಿದೆ. ಆರೋಪಿ ಸತೀಶ್ ರೆಡ್ಡಿಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.