alex Certify ಇಂದಿನಿಂದ ಬೆಂಗಳೂರಲ್ಲಿ ‘ಏರೋ ಇಂಡಿಯಾ ಶೋ’ : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ |Aero India show 2025 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಬೆಂಗಳೂರಲ್ಲಿ ‘ಏರೋ ಇಂಡಿಯಾ ಶೋ’ : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ |Aero India show 2025

ಬೆಂಗಳೂರು : ಬೆಂಗಳೂರಿಬ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಇಂದಿನಿಂದ (ಫೆಬ್ರವರಿ 10) 14 ರವರೆಗೆ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ನಡೆಯಲಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರನ್ನು ಮೋಡಿ ಮಾಡಲಿದೆ.

ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
ಏರೋ ಇಂಡಿಯಾದಲ್ಲಿ 140ಕ್ಕೂ ಅಧಿಕ ವಿದೇಶಿ ರಕ್ಷಣಾ ಉತ್ಪನ್ನಗಳ ಉತ್ಪಾದಕ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಮಿಲಿಟರಿ ಮತ್ತು ಮಿಲಿಟರಿ ಸರಕು ಸಾಗಾಣೆ ವಿಮಾನ, ಶಸ್ತ್ರಾಸ್ತ್ರ, ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳು ಭಾಗವಹಿಸಲಿವೆ. ವಿವಿಧ ದೇಶಗಳ ಯುದ್ಧ ವಿಮಾನಗಳು, ಸರಕು ಸಾಗಣೆ, ನಾಗರಿಕ ವಿಮಾನ, ಐಷಾರಾಮಿ ವಿಮಾನ ಕಂಪನಿಗಳು ಕೂಡ ಭಾಗವಹಿಸಲಿವೆ.

ಫೆಬ್ರವರಿ 10ರಂದು ಉದ್ಘಾಟನಾ ಸಮಾರಂಭ ಇರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಶುಲ್ಕ ಪಾವತಿಸಿ ಟಿಕೆಟ್ ಖರೀದಿಸಿದವರು ಫೆಬ್ರವರಿ 11 ರಿಂದ 14ರ ವರೆಗೆ ನಾಲ್ಕು ದಿನಗಳಲ್ಲಿ ಯಾವುದಾದರೂ ಒಂದು ದಿನ ಏರ್ ಡಿಸ್ ಪ್ಲೇ ಏರಿಯಾಗೆ ತೆರಳಿ ಪ್ರದರ್ಶನ ವೀಕ್ಷಿಸಬಹುದು. ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿ ಸೇರಿ ನಿತ್ಯ ಎರಡು ಬಾರಿ ಪ್ರದರ್ಶನ ಇರುತ್ತದೆ

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...