ಕಾರಿನ ಉಪಕರಣವೊಂದನ್ನು ಮಾರಾಟ ಮಾಡಲು ಫೇಸ್ಬುಕ್‌ನಲ್ಲಿ ಮುಂದಾದ ವ್ಯಕ್ತಿಯೊಬ್ಬ ತಾನು ಶೇರ್ ಮಾಡಿದ ಚಿತ್ರವೊಂದರಲ್ಲಿ ಡ್ರಗ್ಸ್ ಇದ್ದ ಕಾರಣ ಪೊಲೀಸರ ಅತಿಥಿಯಾಗಿದ್ದಾನೆ.
ಕೆಟಲಿಟಿಕ್ ಕನ್ವರ್ಟರ್‌ನ ಚಿತ್ರವೊಂದನ್ನು ಹಂಚಿಕೊಂಡ ಜೇಮ್ಸ್ ಕರ್ಟ್ಸ್ ಹೆಸರಿನ ಈತ, ಚಿತ್ರದಲ್ಲಿ ತಾನು ಮಾರಲಿಚ್ಛಿಸಿದ ಉತ್ಪನ್ನದೊಂದಿಗೆ ಏನೆಲ್ಲಾ ಸೆರೆಯಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳದೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಬಿಟ್ಟಿದ್ದಾನೆ.
ಚಿತ್ರದಲ್ಲಿ ಪ್ಯಾಪಾಫರ್ಲೇನಿಯಾದ ಎಂಬ ಡ್ರಗ್ ತುಂಬಿರುವ ಪ್ಲಾಸ್ಟಿಕ್ ಪೌಚ್ ಒಂದು ಸ್ಪಷ್ಟವಾಗಿ ಕಾಣುತ್ತಿದ್ದು, ಜೊತೆಯಲ್ಲಿ ಸಿರಿಂಜ್ ಒಂದನ್ನು ನೋಡಬಹುದಾಗಿದೆ.
BIG BREAKING: ಡ್ರಗ್ಸ್ ಪ್ರಕರಣ; ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅರೆಸ್ಟ್
“ಬಹುಶಃ ಆತ ಮದ್ದಿನ ನಶೆಯಲ್ಲಿದ್ದ ಅನಿಸುತ್ತೆ. ಆತ ಪೋಸ್ಟ್ ಮಾಡಿದ ಚಿತ್ರದ ಹಿನ್ನೆಲೆಯಲ್ಲಿ ಕಾಫಿ ಟೇಬಲ್ ಮೇಲೆ ದೊಡ್ಡ ಬ್ಯಾಗ್ ತುಂಬಾ ಮೆತ್ ಹಾಗೂ ಸಿರಿಂಜ್ ಅನ್ನು ಬಿಟ್ಟಿದ್ದಾನೆ,” ಎಂದು ಸ್ಟೋನ್ ಕೌಂಟಿ ಶೆರಿಫ್ ಡಗ್ ರಾಡೆರ್ ತಿಳಿಸಿದ್ದಾರೆ.
“ನೀವು ಸಾಮಾಜಿಕ ಜಾಲತಾಣದಲ್ಲಿ ವಸ್ತುಗಳನ್ನು ಮಾರುತ್ತಿದ್ದಲ್ಲಿ, ಹಿನ್ನೆಲೆಯಲ್ಲಿ ಡ್ರಗ್ಸ್ ಇಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ!” ಎಂದು ರಾಡೆರ್ ತಿಳಿಸಿದ್ದಾರೆ.