ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್ಸೈಕಲ್ ಸವಾರಿ ಮಾಡುತ್ತಿರುವ ಸ್ಟೈಲಿಶ್ ಶ್ವಾನ ಇದಾಗಿದೆ.
ಇದರ ಹೆಸರು ವಿರೇನ್. ತನ್ನ ಸ್ನೇಹಿತ ಅಕ್ಷಯ್ ಜೊತೆ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಬಂದಿದ್ದ ವಿರೇನ್. ಅಕ್ಷಯ್ ಕೇರಳದವರಾಗಿದ್ದು ಮಲಯಾಳಿ ನಟ. ಅಕ್ಷಯ್ನ ಸ್ನೇಹಿತೆ ನೀರಜಾ ಕೂಡ ಜೊತೆಗಿದ್ದರು. ಈಕೆ ಉತ್ತರಾಖಂಡ್ ಮೂಲದವರು. ಮೂವರೂ ಲೇಹ್ ಲಡಾಖ್ಗೆ ಪ್ರವಾಸ ಮಾಡುತ್ತಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಆರಂಭದಲ್ಲಿ ಅಕ್ಷಯ್ ಮತ್ತು ಅವರ ಮುದ್ದಾದ ನಾಯಿ ವೀರೇನ್, ಲೇಹ್-ಲಡಾಖ್ಗೆ ಪ್ರವಾಸವನ್ನು ಕೈಗೊಂಡಿದ್ದರು. ಇಬ್ಬರೂ ಲೇಹ್ ಲಡಾಖ್ಗೆ ಪ್ರಯಾಣಿಸುವಾಗ ಅವರು ಹಾದುಹೋಗುವ ಎಲ್ಲಾ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ದೆಹಲಿಯಲ್ಲಿ ಸ್ನೇಹಿತೆ ನೀರಜಾ ಸೇರಿಕೊಂಡಿದ್ದಾರೆ. ಮೂವರೂ ಆಗ್ರಾ ತಲುಪಿ ತಾಜ್ ಮಹಲ್ಗೆ ಭೇಟಿ ನೀಡಿದ್ದರು. ತಾಜ್ನ ಪಶ್ಚಿಮ ಗೇಟ್ನಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸುತ್ತಿರುವ ನಾಯಿಯನ್ನು ಕಂಡು ಜನರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸೆಲ್ಫೀ ತೆಗೆಸಿಕೊಳ್ಳಲು ಮುಗಿಬಿದ್ದರು.