alex Certify ʼಹೋಂ ವರ್ಕ್‌ʼ ಸಮಸ್ಯೆ ಕುರಿತು‌ 6 ವರ್ಷದ ಬಾಲಕಿಯಿಂದ ಪ್ರಧಾನಿಗೆ ದೂರು; ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹೋಂ ವರ್ಕ್‌ʼ ಸಮಸ್ಯೆ ಕುರಿತು‌ 6 ವರ್ಷದ ಬಾಲಕಿಯಿಂದ ಪ್ರಧಾನಿಗೆ ದೂರು; ಮುದ್ದಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿ ಹೋಗಿದೆ. ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠಗಳು ಇದೀಗ ಆನ್​ಲೈನ್​ ತರಗತಿಯ ರೂಪವನ್ನ ಪಡೆದುಕೊಂಡಿದೆ.

ಕಾಶ್ಮೀರದ ಆರು ವರ್ಷದ ಬಾಲಕಿಯೊಬ್ಬಳು ಆನ್​ಲೈನ್​ ಕ್ಲಾಸಿನಿಂದ ತನಗಾಗುತ್ತಿರುವ ಸಮಸ್ಯೆಯನ್ನ ನೇರವಾಗಿ ಪ್ರಧಾನಿ ಮೋದಿ ಬಳಿಯಲ್ಲೇ ಹೇಳಿಕೊಳ್ಳಲು ಮುಂದಾಗಿದ್ದಾಳೆ. ಸೋಶಿಯಲ್​ ಮೀಡಿಯಾದಲ್ಲಿ ಈ ಮುದ್ದಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಹೋಮ್​ ವರ್ಕ್ ಹಾಗೂ ಅವಧಿಗೂ ಮೀರಿದ ತರಗತಿಯ ಬಗ್ಗೆ ಕಾಶ್ಮೀರದ ಬಾಲಕಿ ಪ್ರಧಾನಿ ಬಳಿ ಕಷ್ಟ ತೋಡಿಕೊಂಡಿದ್ದು ಈ ವಿಡಿಯೋ ಲಕ್ಷಾಂತರ ಮಂದಿ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೀಷ್​, ಗಣಿತ , ಕಂಪ್ಯೂಟರ್ ಶಿಕ್ಷಣ ಹೀಗೆ ಮಕ್ಕಳಿಗೆ ಸಿಕ್ಕಾಪಟ್ಟೆ ಕೆಲಸ ನೀಡಲಾಗ್ತಿದೆ. ಮೋದಿ ಸಾಬ್​, ಯಾಕೆ ಹೀಗೆ ಮಕ್ಕಳಿಗೆ ಇಷ್ಟೊಂದು ಕೆಲಸ ಕೊಡೋದು..? ಎಂದು ಬಾಲಕಿ ಪ್ರಶ್ನೆ ಹಾಕಿದ್ದಾಳೆ.

ಈ ದೂರು ತುಂಬಾನೇ ಮುದ್ದಾಗಿದೆ. 48 ಗಂಟೆಯೊಳಗಾಗಿ ಮಕ್ಕಳ ಹೋಮ್​ವರ್ಕ್​ ಭಾರ ಕಡಿಮೆ ಮಾಡುವಂತಹ ಪಾಲಿಸಿಯನ್ನ ತರುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದೇವೆ. ಬಾಲ್ಯ ಅನ್ನೋದು ದೇವರು ಕೊಟ್ಟ ಉಡುಗೊರೆಯಾಗಿದೆ. ಈ ಅವಧಿಯಲ್ಲಿ ಮಕ್ಕಳು ಸಂತಸದಿಂದ ಇರಬೇಕು ಎಂದು ಜಮ್ಮು ಕಾಶ್ಮೀರದ ಲೆ.ಗವರ್ನರ್​ ಕಚೇರಿ ಟ್ವೀಟ್​ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...