ಬೆಂಗಳೂರು: ಮುಸ್ಲಿಂ ದಂಪತಿಗಳಿಂದ ಹಿಂದೂ ಮಗುವಿನ ದತ್ತು ವಿಚಾರಕ್ಕೆ ಸಂಬಂಧಿಸಿದಂತೆ ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದವನ್ನು ಹೈಕೋರ್ಟ್ ರದ್ದು ಪಡಿಸಿದೆ.
ಮಹಮ್ಮದಿಯ ಕಾನೂನಿನಲ್ಲಿಯೂ ದತ್ತು ಸ್ವೀಕಾರ ಕಾನೂನು ಬಹಿರವಾಗಿದೆ. ಬಡತನದ ಕಾರಣಕ್ಕೆ ಮಗುವಿನ ದತ್ತು ಕೊಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಗು ಸಾಕಲಾಗದಿದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ನೀಡಬಹುದಿತ್ತು. ಸರ್ಕಾರಿ ಶಾಲೆಯಲ್ಲಿ ಓದಿಸಬಹುದಿತ್ತು. ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಬಹುದಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಗರ್ಭದಲ್ಲಿನ ಮಗುವಿಗೂ ಗೌರವಯುತ ಜೀವನದ ಹಕ್ಕು ಇದೆ. ಹೀಗಾಗಿ ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದ ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಬಿ. ವೀರಪ್ಪ, ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ಹೇಳಿದೆ.
ತಂದೆ- ತಾಯಿಗೆ ಮಗು ಬೇಕಿದ್ದರೆ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಲಿ. ಮಗುವಿನ ಹಿತದೃಷ್ಟಿಯಿಂದ ಸಮಿತಿ ನಿರ್ಧಾರ ಕೈಗೊಳ್ಳಬೇಕು. ಮಗು ಮಾರಾಟವಾಗದಂತೆ ಸ್ಥಳೀಯ ಪೊಲೀಸರು ನಿಗಾವಹಿಸಬೇಕು ಎಂದು ಹೈಕೋರ್ಟ್ ವಿಭಾಗಿಯ ಪೀಠದಿಂದ ಆದೇಶ ನೀಡಲಾಗಿದೆ.